ರಾಜ್ಯದಲ್ಲೂ ಪತಂಜಲಿ ಉತ್ಪನ್ನಗಳು ಬ್ಯಾನ್​ ?: ಅರೋಗ್ಯ ಸಚಿವರು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪತಂಜಲಿಯ (Patanjali) ದಿವ್ಯ ಫಾರ್ಮಸಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದುಗೊಳಿಸಿ, ಮಾರಾಟ ಬ್ಯಾನ್‌ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲೂ ಪತಂಜಲಿ ಉತ್ಪನ್ನಗಳು ಬ್ಯಾನ್​ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಈ ಕುರಿತು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಪತಂಜಲಿ ಉತ್ಪನ್ನಗಳನ್ನು ಪರೀಕ್ಷೆ ಮಾಡುವಂತೆ ಆದೇಶಿಸಿದ್ದಾರೆ.

ಉತ್ತರಕಾಂಡದ ಬಿಜೆಪಿ ಸರ್ಕಾರವೇ ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ನಾನು ಆದೇಶಿಸಿದ್ದೆ. ಆಗ ತನ್ನ ಮನೆಗೇ ಬೆಂಕಿ ಬಿದ್ದಂತೆ ಚಡಪಡಿಸಿದ್ದ ವಿಪಕ್ಷ ನಾಯಕ ಆರ್​ ಅಶೋಕ, ಪತಂಜಲಿ ಜನ ಮೆಚ್ಚಿದ ಬ್ರ್ಯಾಂಡ್ ಎಂದು ಸರ್ಟಿಫಿಕೇಟ್ ಕೊಟ್ಟಿದ್ದರು. ಜೊತೆಗೆ ಪತಂಜಲಿ ಸಂಸ್ಥೆ ‌ಮೇಲೆ ದ್ವೇಷ ಯಾಕೆ ಎಂದು ನನ್ನನ್ನು ಪ್ರಶ್ನಿಸಿದ್ದರು. ಈಗ ಅವರದ್ದೇ ಪಕ್ಷ ಅಧಿಕಾರದಲ್ಲಿರುವ ಉತ್ತರಕಾಂಡ ಸರ್ಕಾರ ಪತಂಜಲಿಯ 14 ಉತ್ಪನ್ನಗಳ ಪರವಾನಿಗೆಯನ್ನೇ ರದ್ದು ಮಾಡಿದೆ. ಈಗ ಅಶೋಕ್‌ರವರು ನನಗೆ ಕೇಳಿದ್ದ ಪ್ರಶ್ನೆಯನ್ನು ಉತ್ತರಕಾಂಡ ಸರ್ಕಾರಕ್ಕೂ ಕೇಳುತ್ತಾರಾ? ಎಂದು ವಾಗ್ದಾಳಿ ನಡೆಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಪತಂಜಲಿ ಉತ್ಪಾದನೆ ಉಪಯೋಗಿಸಿ ಯಾರಿಗಾದರೂ ಹಾನಿ ಆಗಿದ್ದರೆ ತಿಳಿಸಿ..

LEAVE A REPLY

Please enter your comment!
Please enter your name here

error: Content is protected !!