ಆಲೂರು ಪಟ್ಟಣದಲ್ಲಿ ಆರ್ ಎಸ್ ಎಸ್ ಸ್ವಯಂಸೇವಕರಿಂದ ಪಥಸಂಚಲನ

ಹೊಸದಿಗಂತ ವರದಿ, ಆಲೂರು :

ವಿಜಯ ದಶಮಿ ಅಂಗವಾಗಿ ಆಲೂರು ಪಟ್ಟಣದಲ್ಲಿ ಆರ್ ಎಸ್ ಎಸ್ ಸ್ವಯಂಸೇವಕರಿಂದ ಪಥ ಸಂಚಲನ ಏರ್ಪಡಿಸಲಾಗಿತ್ತು.

ಪಟ್ಟಣದಲ್ಲಿ ರಾಷ್ಟ್ರೀಯ ಸೇವಾ ಸಂಘದ ಸ್ವಯಂ ಸೇವಕರು ಪಥ ಸಂಚಲನ ನಡೆಸುವ ಮೂಲಕ ಸಂಚಲನ ಮೂಡಿಸಿದರು ಜನರಲ್ಲಿ ರಾಷ್ಟ್ರ ಪ್ರೇಮ ಬೆಳೆಸುವ ಉದ್ದೇಶದಿಂದ ಪಥ ಸಂಚಲನ ನಡೆಸಲಾಯಿತು.‌ ಹೊಸ ಗಣವೇಷ ಧರಿಸಿ ಸ್ವಯಂ ಸೇವರು 150ಕ್ಕೂ ಹೆಚ್ಚು ಸೇವಕರು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.ಚಿಕ್ಕ ಮಕ್ಕಳು ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಒಂದು ತಾಸು ನಡೆದ ಪಥ ಸಂಚಲನ ನಡೆಸಿ ಎರಡು ಕಿ.ಮೀ.ದೂರ ಸಂಚರಿಸಿತು. ದಾರಿಯುದ್ದಕ್ಕೂ ಸಾರ್ವಜನಿಕರು ಪಥ ಸಂಚಲನ ವೀಕ್ಷಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸಂಘದ ಪ್ರಚಾರಕರು,ಭಾರತೀಯ ಕಿಸಾನ್ ಸಂಘ ಹಾಗೂ ಉತ್ತರ ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ಜಯರಾಮ್ ಬೊಳ್ಳಾಜೆ ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ನಿತ್ಯವೂ ಬೆಳವಣಿಗೆ ಹೊಂದುತ್ತಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದ 80 ರಾಷ್ಟ್ರಗಳಲ್ಲಿ ಸಂಘ ಕೆಲಸ ಮಾಡುತ್ತಿದೆ. ಈ ದೇಶಕ್ಕೆ ಸಂಘ ಹಲವಾರು ಕೊಡುಗೆ ನೀಡಿದೆ. ಆದರೆ, ಕೆಲವರು ಸಂಘವನ್ನು ಟೀಕಿಸಿ ಆರೋಪಿಸಿ ಮಾತನಾಡುತ್ತಾರೆ. ಇದಕ್ಕೆ ಸಂಘ ತಲೆ ಕೆಡಿಸಿಕೊಳ್ಳುವುದಿಲ್ಲ. ಆ ರೀತಿ ವಿರೋಧ ಮಾಡುವವರೇ, ಸಂಘದ ನೆರವು ಕೇಳಿದವರಿದ್ದಾರೆ ಸಂಘ ಅಂದ್ರೆ, ದೇಶದ ರಕ್ಷಣೆ, ಸಂಸ್ಕಾರ. ಸಂಘ ಇಲ್ಲದಿದ್ದರೆ ಈ ದೇಶ ಏನಾಗುತ್ತಿತ್ತು ಎಂಬುದು, ಸ್ವತಃ ವಿರೋಧ ಮಾಡುವವರಿಗೂ ಗೊತ್ತಿದೆ ಈ ನಾಡಿನ ಸೇವೆ ಮಾಡುವವರು ನೀವೇ ಎಂದು ಶ್ಲಾಘಿಸಿದ್ದರು. ಇಂತಹ ಹಲವಾರು ಸಮಾಜಮುಖೀ ಕಾರ್ಯವನ್ನು ಸಂಘ ನಿತ್ಯವೂ ಮಾಡುತ್ತಿದೆ.

ಡಾ.ಹೆಗಡೆವಾರ್ 1925 ರ ವಿಜಯ ದಶಮಿಯಂದು ಒಟ್ಟು ಹಾಕಿದ ಈ ಸಂಸ್ಥೆ ಇಂದಿಗೂ ನಿರಂತರ ಹಿಂದೂ ಧರ್ಮದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತದೆ ಕೆಲ ರಾಷ್ಟ್ರ ನಾಯಕರು ಸಂಘಟನೆಯ ಬಗ್ಗೆ ಅಪಸ್ವರ ಹೇಳಿದ್ದರೂ ಸಹ ಸಂಘದ ನೇತಾರ ಹೆಗಡೆವಾರ್ ನನಗೆ ದೇಶಾಭಿಮಾನದ ಹುಚ್ಚಿದೆ ಅದಕ್ಕಾಗಿ ನಾನು ಸಂಘಟನೆ ಮಾಡುತ್ತಿದ್ದೇನೆ ಎಂದು ಮಾರ್ಮಿಕವಾಗಿ ನುಡಿದಿದ್ದರು ಅದ್ದರಿಂದ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಪ್ರತಿಯೊಬ್ಬ ನಾಗರೀಕರು ಮುನ್ನುಡಿ ಬರೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಸಂಘ ಚಾಲಕರ ಲಕ್ಷ್ಮಣ,ಕಾರ್ಯಕ್ರಮದ ಅಧ್ಯಕ್ಷ ಬೆಟ್ಟದಯ್ಯ,ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್,ಜಿಲ್ಲಾ ಕಾರ್ಯವಹ ನವೀನ್,ಸಂತೋಷ್,ನರೇಶ್ ಕದಾಳು,ತಾಲ್ಲೂಕು ಕಾರ್ಯವಾಹ ವಿನೋದ್,ಸಹ ಕಾರ್ಯವಾಹ. ಸಂತೋಷ,ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗರಾಜು ಹುಲ್ಲಹಳ್ಳಿ, ನಾಗರಾಜು ಕಟ್ಟೆಗದ್ದೆ,ಗಣೇಶ್,ಮೋಹನ್,ರುದ್ರೇಗೌಡ,ಚಂದ್ರೆಶೇಖರ್, ಕಾಳಿಂಗ,ಲೋಹಿತ್,ಹರೀಶ್ ಹಾಗೂ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!