ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದ ಕಿರುತೆರೆ ನಟಿ ಪವಿತ್ರಾ ಜಯರಾಂ ಅಂತ್ಯಕ್ರಿಯೆ ಹುಟ್ಟುರಾದ ಮಂಡ್ಯದ ಉಮ್ಮಡಹಳ್ಳಿಯಲ್ಲಿ ಜರುಗಿದೆ. ಒಕ್ಕಲಿಗ ಸಂಪ್ರದಾಯದಂತೆ ಪವಿತ್ರಾ ಕಾರ್ಯ ನೆರವೇರಿದೆ.
ಪವಿತ್ರಾ ಅವರು ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಕಾರು ನಿನ್ನೆ ಆಂಧ್ರ ಪ್ರದೇಶದ ಕರ್ನೂಲಿನ ಬಳಿ ಅಪಘಾತಕ್ಕೆ ಈಡಾಗಿತ್ತು.
ಪವಿತ್ರಾ ಅಭಿಮಾನಿಗಳು, ಕುಟುಂಬದವರು ಹಾಗೂ ಸಿನಿ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.