ಹೊಸದಿಗಂತ ವರದಿ ಹುಬ್ಬಳ್ಳಿ:
ವಿದ್ಯಾರ್ಥಿನಿ ಮೀನಾ ಹತ್ಯೆ ಖಂಡಿಸಿ ಹಾಗೂ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಹಿಂದ ಸಂಘಟನೆ ಧಾರವಾಡ ಜಿಲ್ಲಾ ಹಾಗೂ ಹು-ಧಾ ಮಹಾನಗರ ಘಟಕ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಇಲ್ಲಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ 30 ಕ್ಕೂ ಪ್ರತಿಭಟನಾಕಾರರು ಅಮಾಯಕ ವಿದ್ಯಾರ್ಥಿ ಮೀನಾ ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ಯಾಗಬೇಕು, ಯಾತಾಕ್ಕಾಗಿ ಹೋರಾಟ ನ್ಯಾಯಾಕ್ಕಾಗಿ ಹೋರಾಟ, ಆರೋಪಿಗೆ ಧಿಕ್ಕಾರ ಧಿಕ್ಕಾರ ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಅಹಿಂದ ಸಂಘಟನೆಯ ಸದಸ್ಯ ರಾಜಶೇಖರ ಮೆಣಸಿನಕಾಯಿ ಮಾತನಾಡಿ, ಮಡಿಕೇರಿ ಜಿಲ್ಲೆ ಕೊಡಗು ತಾಲೂಕಿ ವಿದ್ಯಾರ್ಥಿನಿ ಮೀನಾಳಾ ಹತ್ಯೆ ಖಂಡನೀಯ. ಸಮಾಜ ಎತ್ತ ಸಾಗುತ್ತಿದೆ ಎಂಬುವುದು ಬೇಜಾರದ ಸಂಗತಿ. ಹಿಂದೆ ವಿದ್ಯಾರ್ಥಿ ನೇಹಾ ಹಿರೇಮಠ ಹತ್ಯೆಯೂ ಇದೇ ರೀತಿಯಾಗಿತ್ತು. ಆಗ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರಿಗೆ ಮೀನಾ ಹತ್ಯೆ ಕಣ್ಣಿಗೆ ಯಾಕೆ ಕಾಣುತ್ತಿಲ್ಲ ಎಂದು ಹರಿಹಾಯ್ದರು.
ಹಿಂದೂ ಸಂಘಟನೆಗಳು ಮಲಗಿಕೊಂಡಿದ್ದಾರಾ ಎಂದು ಪ್ರಶ್ನಿಸಿದ ಅವರು, ಮೀನಾ ಹತ್ಯೆ ವಿಚಾರದಲ್ಲಿಯೂ ಪ್ರತಿಭಟನೆ ನಡೆಸಿ ಹೋರಾಟ ಮಾಡಬೇಕು ಎಂದು ಆಗ್ರಹಿಸಿದರು.
ಸದಸ್ಯ ಶಿವಳ್ಳಿ ಮುತ್ತಣ್ಣ ಮಾತನಾಡಿ, ವಿದ್ಯಾರ್ಥಿನಿ ಮೀನಾ ಸಹ ಭಾರತೀಯಳಾಗಿದ್ದಾಳೆ. ಇವಳ ಸಾವು ಯಾಕೆ ಬಿಜೆಪಿ ಅವರಿಗೆ ಕಾಣುತ್ತಿಲ್ಲ. ಮುಸ್ಲಿಂ ಯುವಕ ಕೊಲೆ ಮಾಡಿದರೆ ಮಾತ್ರ ಬಿಜೆಪಿ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ಪೊಲೀಸರು ಆರೋಪಿ ಬಂಧಿಸಿದ್ದಾರೆ. ಈ ಪ್ರಕರಣಕ್ಕೂ ತ್ವರಿತ ನ್ಯಾಯಾಲಯ ಸ್ಥಾಪಿಸಿ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಬಾಬಾಜನ್ ಮುಧೋಳ, ಯೂಸೂಫ ಬಳ್ಳಾರಿ, ಬಿ.ಎ. ಮುಧೋಳ ಇದ್ದರು.