ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಪವಿತ್ರಾ ಗೌಡ ಅವರ ಪುತ್ರಿ ಖುಷಿ ಗೌಡ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಪರಿಸ್ಥಿತಿ ಏನೇ ಇರಲಿ ನನ್ನ ಸಹಾಯಕ್ಕೆ ಬಂದೇ ಬರುತ್ತಾರೆ ಎಂದು ನಾನು ಕಣ್ಣು ಮುಚ್ಚಿಕೊಂಡು ನಂಬಿದ್ದರೂ ಅದು ನೀನೇ ಅಮ್ಮ’ ನನಗೆ ಗೊತ್ತು ದಿನದಲ್ಲಿ ನನಗೆ ಏನೇ ಬೇಕಿದ್ದರೂ ಆಕೆ ಇದ್ದಾಳೆ ಎಂದು ಹೀಗಾಗಿನೇ ಆಕೆಯನ್ನು ಬೆಸ್ಟ್ ಅಮ್ಮ ಎಂದು ಕರೆಯುವುದು ಅಲ್ಲದೇ ಅಂತಹ ಅಮ್ಮನನ್ನು ಪಡೆಯುವುದಕ್ಕೆ ಪುಣ್ಯ ಮಾಡಿದ್ದೀನಿ’ ಲವ್ ಯು ಅಮ್ಮಾ ಎಂದು ಬರೆದುಕೊಂಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರ ಗೌಡ ಎ-1 ಮತ್ತು ದರ್ಶನ್ ಎ-2 ಆರೋಪಿಗಳಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.