ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ವಿಚಾರದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಬಗ್ಗೆ ಮಾಜಿ ಪತಿ ಸಂಜಯ್ ಸಿಂಗ್ ಮಾತನಾಡಿದ್ದಾರೆ.
ಆಕೆ ಒಂದು ಸೊಳ್ಳೆ ಹೊಡೆಯೋಕೂ ಹಿಂದೆ ಮುಂದೆ ನೋಡುತ್ತಿದ್ದವಳು, ಇನ್ನು ಒಂದು ಜೀವ ತೆಗೆದು ಹಾಕ್ತಾಳೆ ಅಂದ್ರೆ ಅದು ನಂಬೋ ಮಾತಲ್ಲ. ದರ್ಶನ್ ಕರೆದಿದ್ದಕ್ಕೆ ಮರ್ಡರ್ ಜಾಗಕ್ಕೆ ಹೋಗಿರಬೇಕು ಅಷ್ಟೆ. ಆಕೆ ಕೊಲೆ ಮಾಡಿರೋದಿಲ್ಲ ಎಂದು ಸಂಜಯ್ ಹೇಳಿದ್ದಾರೆ.
ನಾನು ಉತ್ತರಪ್ರದೇಶದಲ್ಲಿದ್ದೇನೆ, ನಮ್ಮ ಡಿವೋರ್ಸ್ ಆಗಿ ಹನ್ನೊಂದು ವರ್ಷ ಆಗಿದೆ. ಆಕೆ ನನ್ನ ಹೆಂಡತಿಯಾಗಿದ್ದಾಗಲೇ ದರ್ಶನ್‌ರನ್ನು ಇಷ್ಟಪಟ್ಟಿದ್ದಳು. ಸಿನಿಮಾ ಫೀಲ್ಡ್‌ಗೆ ಹೋದಮೇಲೆ ನಮ್ಮ ನಡುವೆ ಅಂತರ ಹೆಚ್ಚಾಗಿ, ಆಕೆ ಡಿವೋರ್ಸ್ ಕೇಳಿದಾಗ ಕೊಟ್ಟೆ. ಮಗಳನ್ನು ತುಂಬಾ ಮಿಸ್ ಮಾಡಿಕೊಳ್ತೇನೆ. ವರ್ಷಗಳಲ್ಲಿ ನಾನು ಎರಡು ಮೂರು ಬಾರಿ ಮಾತ್ರ ಅವಳ ಜೊತೆ ಮಾತನಾಡಿದ್ದೇನೆ ಅಷ್ಟೆ ಎಂದಿದ್ದಾರೆ.