Monday, March 27, 2023

Latest Posts

ಸಿನಿಮಾ ಶೂಟಿಂಗ್ ವೇಳೆ ಪವನ್‌ ಕಲ್ಯಾಣ್‌ ಬೈಕ್‌ ರೈಡ್‌ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯ ಮತ್ತು ಸಿನಿಮಾಗಳಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಸದ್ಯ ಅವರು ‘ಹರಿಹರ ವೀರಮಲ್ಲು’ ಸಿನಿಮಾ ಮುಗಿಸುವ ಕೆಲಸದಲ್ಲಿದ್ದಾರೆ. ರಾಜಕೀಯ ಕಾರಣಗಳಿಂದ ಚಿತ್ರದ ಶೂಟಿಂಗ್ ಈಗಾಗಲೇ ತಡವಾಗಿರುವುದರಿಂದ ಪವನ್ ತಮ್ಮ ಟಾಕಿ ಭಾಗದ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸಿ ಹೊರ ಬರಲು ನೋಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಹಾಕಲಾಗಿದ್ದ ಅದ್ಧೂರಿ ಸೆಟ್‌ನಲ್ಲಿ ಸಾವಿರಾರು ಕಲಾವಿದರ ಮಧ್ಯೆ ಪವನ್‌ನ ಪ್ರಮುಖ ದೃಶ್ಯಗಳನ್ನು ಚಿತ್ರತಂಡ ಚಿತ್ರೀಕರಿಸಿದೆ. ಇತ್ತೀಚೆಗಷ್ಟೇ ಪವನ್ ಕಲ್ಯಾಣ್ ‘ಬಿಎಂಡಬ್ಲ್ಯು ಆರ್1250 ಜಿಎಸ್’ ಮಾಡೆಲ್ ಬೈಕ್ ಏರಿ ಫಿಲಂ ಸಿಟಿ ಸುತ್ತುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ. ಶೂಟಿಂಗ್ ಬಿಡುವಿನ ವೇಳೆಯಲ್ಲಿ ಪವನ್ ಬೈಕ್ ಹಾಕಿಕೊಂಡು ಸ್ವಲ್ಪ ಹೊತ್ತು ತಿರುಗಾಡಿದ್ದಾರೆ.

ಆ ವೇಳೆ ಕೆಲವರು ಈ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗಳು ವೈರಲ್ ಆಗುತ್ತಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!