Tuesday, October 3, 2023

Latest Posts

ʻಅನ್ಯಾಯವಾಗಿ ರಿಮಾಂಡ್‌ಗೆ ಕಳಿಸಿದ್ದಾರೆ, ಚಂದ್ರಬಾಬುಗೆ ಧೈರ್ಯ ಹೇಳಲು ಬಂದಿದ್ದೇನೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೌಶಲಾಭಿವೃದ್ಧಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ಚಂದ್ರಬಾಬು ಅವರನ್ನು ಬಂಧಿಸಿ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ. ಅಂದಿನಿಂದ, ಚಂದ್ರಬಾಬು ಜಾಮೀನು ಅರ್ಜಿ ಸಲ್ಲಿಸಿದರೂ ನ್ಯಾಯಾಲಯದ ಮುಂದೂಡಿಕೆಯಿಂದಾಗಿ ಬೇಲ್‌ ಸಿಗದೆ ಜೀಲಿನಲ್ಲೇ ಇರಬೇಕಾಗಿದೆ. ಹಾಗಾಗಿ ಇಂದು ಚಂದ್ರಬಾಬು ಪರಾಮರ್ಶಿಲು ಜನಸೇನಾ ನಾಯಕ ಪವನ್‌ ಕಲ್ಯಾಣ್‌ ಇಂದು ಸೆಂಟ್ರಲ್‌ ಜೈಲಿಗೆ ಭೇಟಿ ಕೊಟ್ಟು, ಅವರೊಂದಿಗೆ 40 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಲಿದ ಪವನ್, ಚಂದ್ರಬಾಬು ಅವರನ್ನು ಅನ್ಯಾಯವಾಗಿ ರಿಮಾಂಡ್‌ಗೆ ಕಳಿಸಿದ್ದಾರೆ, ಅವರಿಗೆ ಧೈರ್ಯ ಹೇಳಲು ಬಂದಿದ್ದೇನೆ ಎಂದರು. ಭಾರಿ ಭ್ರಷ್ಟಾಚಾರ ನಡೆಸುವ, ಭರವಸೆಗಳನ್ನು ಈಡೇರಿಸಲಾಗದ ವ್ಯಕ್ತಿಯ ಆಡಳಿತದಲ್ಲಿ ರಾಜ್ಯ ಕುಸಿಯುತ್ತಿದೆ ಎಂದು ಜಗನ್‌ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಜನರ ಡೇಟಾ ಕದಿಯುವುದು ಅಪರಾಧವಲ್ಲವೇ? ಎಂದು ಕೇಳಿದರು.

2014ರಲ್ಲಿ ನಾನು ನರೇಂದ್ರ ಮೋದಿ ಅವರನ್ನು ಬೆಂಬಲಿಸಿದಾಗ ಎಲ್ಲರೂ ನನ್ನನ್ನು ಟೀಕಿಸಿದ್ದರು, ಆದರೆ ಅವರು ದೇಶದ ಬಲಿಷ್ಠ ನಾಯಕನಾಗಬೇಕು ಎಂಬ ಕಾರಣಕ್ಕೆ ಮೋದಿ ಅವರನ್ನು ಬೆಂಬಲಿಸಿದ್ದೇನೆ ಎಂದು ಪವನ್ ಸ್ಪಷ್ಟಪಡಿಸಿದರು. ನಾನು ನಿರ್ಧಾರ ತೆಗೆದುಕೊಂಡರೆ, ಅದರಿಂದ ಹಿಂದೆ ಸರಿಯುವುದಿಲ್ಲ. ದೇಶದ ಸಮಗ್ರತೆ ಮತ್ತು ಅಭಿವೃದ್ಧಿಗಾಗಿ ಏನು ಬೇಕಾದರೂ ಮಾಡುತ್ತೇನೆ ಎಂದು ಪವನ್ ಈ ಸಂದರ್ಭದಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!