CINE| ಬಾಲ್ಯದ ಫೋಟೋ ಶೇರ್ ಮಾಡಿ ಅಣ್ಣನಿಗೆ ಬರ್ತಡೇ ವಿಶಸ್‌ ಹೇಳಿದ ಪವರ್‌ ಸ್ಟಾರ್ ಪವನ್‌ ಕಲ್ಯಾಣ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬ, ಟಾಲಿವುಡ್ ಸೆಲೆಬ್ರಿಟಿಗಳು, ಸಿನಿಮಾ ಮತ್ತು ರಾಜಕೀಯ ಗಣ್ಯರು, ಇತರ ಇಂಡಸ್ಟ್ರಿಯ ಗಣ್ಯರು, ಅಭಿಮಾನಿಗಳು…ಎಲ್ಲರೂ ಚಿರಂಜೀವಿ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಅದರಂತೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಕೂಡ ತಮ್ಮ ಅಣ್ಣ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ವಿಶ್‌ ಮಾಡಿದ್ದಾರೆ.

ಅವರ ಬಾಲ್ಯದ ವಿಶೇಷ ಫೋಟೋವನ್ನು ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಪವನ್ ಕಲ್ಯಾಣ್ ಚಿರಂಜೀವಿ ಬಾಲ್ಯದ ಹುಟ್ಟುಹಬ್ಬದ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವರ ಪ್ರತಿ ಹೆಜ್ಜೆಗೆ ಸ್ಫೂರ್ತಿ ನೀಡಿದ ಅಣ್ಣನಿಗೆ ತಮ್ಮನ ಹುಟ್ಟುಹಬ್ಬದ ಶುಭಾಶಯ ಎಂದು ಹಾರೈಸಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಪವನ್ ಕಲ್ಯಾಣ್ ಇಂತಹ ಹಳೆಯ ಫೋಟೋವನ್ನು ಶೇರ್ ಮಾಡುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇದರಿಂದ ಅಭಿಮಾನಿಗಳೆಲ್ಲ ಅಚ್ಚರಿಗೊಂಡಿದ್ದು, ಚಿಕ್ಕವನಿದ್ದಾಗ ಪವನ್ ಫೋಟೋ ನೋಡಿ ತುಂಬಾ ಮುದ್ದಾಗಿದ್ದಾರೆ ಎಂದು ಕಮೆಂಟ್ ಕೂಡ ಮಾಡುತ್ತಿದ್ದಾರೆ. ಕಾಮೆಂಟ್‌ಗಳಲ್ಲಿ ಚಿರಂಜೀವಿಗೆ ಶುಭಾಶಯಗಳು ವ್ಯಕ್ತವಾಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!