GOOD MOOD | ಇಡೀ ದಿನ ಮೂಡ್ ಚೆನ್ನಾಗಿರೋಕೆ ಈ ಏಳು ವಿಷಯಗಳ ಬಗ್ಗೆ ಗಮನ ಕೊಡಿ..

ಬೆಳಗ್‌ಬೆಳಗ್ಗೇನೆ ತಲೆ ತಿನ್ಬೇಡ, ಬೆಳಗ್ಗೆನೇ ಏನಯ್ಯಾ ನಿಂದು ಕಿರೀಕು, ಬೆಳಗ್ಗೆನೇ ಮಂಡೆ ಬಿಸಿ ಮಾಡ್ಬೇಡ, ಥೋ ಬೆಳಗ್ಗೆನೇ ಮೂಡ್ ಎಲ್ಲಾ ಹಾಳಾಯ್ತು, ಬೆಳಗ್ಗೆನೇ ಶುರು ಮಾಡಿದ್ಯಾ?…

ಬೆಳಗ್ಗೆ ಮೂಡ್ ಸರಿಯಾಗಿಲ್ಲದಿದ್ದರೆ ಇಡೀ ದಿನ ಹಾಳೇ,ನಮ್ಮ ಮೂಡ್ ಇತರರಿಂದ ಹಾಳಾಗೋದು ಹೌದು, ಜೊತೆಗೆ ನಮ್ಮ ಮೂಡ್‌ನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ. ಬೇಕಿಲ್ಲದ್ದನ್ನು ಆಲೋಚಿಸಿ, ಕೆಲಸಕ್ಕೆ ಬಾರದನ್ನು ಮಾಡಿ.. ಅಲ್ವಾ? ಬೆಳಗಿನ ಮೂಡ್ ಬೂಸ್ಟ್ ಮಾಡೋಕೆ ಹೀಗೆ ಮಾಡಿ..

  • ಬಿಸಿ ನೀರಿಗೆ ತಲೆಯೊಡ್ಡಿ ಬೆಚ್ಚನೆಯ ಸ್ನಾನ ಮಾಡಿಬಿಡಿ, ಒಳ್ಳೆ ಸ್ನಾನ ಕೂಡ ತುಂಬಾ ಮುಖ್ಯ.
  • ಹೊಟ್ಟೆ ತುಂಬಾ, ಶಕ್ತಿ ನೀಡುವ ಆರೋಗ್ಯಕರ ತಿಂಡಿ ನಿಮ್ಮದಾಗಿರಲಿ, ಏನೇನೋ ತಿಂದು ಮೂಡ್ ಹಾಳುಮಾಡಿಕೊಳ್ಳಬೇಡಿ.
  • ಬೆಳಗಿನ ಕಿರಣಗಳು ಮನೆಯೊಳಗೆ ಬರಲಿ. ಯಾವುದೇ ಸದ್ದಿಲ್ಲದೆ ಹಕ್ಕಿಗಳ ಚಿಲಿಪಿಲಿ ಕೇಳಿ. ಸೂರ್ಯೋದಯ ನೋಡಿ, ಪ್ರಕೃತಿಯನ್ನು ಪ್ರೀತಿಸಿ.
  • ಧ್ಯಾನ, ಯೋಗ, ವ್ಯಾಯಾಮ ನಿಮ್ಮದಾಗಿರಲಿ. ಐದು ನಿಮಿಷ ಉಸಿರಾಟದ ಮೇಲೆ ಗಮನ ಇಡಿ.
  • ಪ್ರೀತಿಪಾತ್ರರನ್ನು ಮಾತನಾಡಿಸಿ, ಹಗ್ ಮಾಡಿ, ಮುತ್ತು ನೀಡಿ, ಪ್ರತಿದಿನವೂ ಅವರಿಗೆ ಐ ಲವ್ ಯೂ ಹೇಳಿ ದಿನವನ್ನು ಆರಂಭಿಸಿ.
  • ಎಲ್ಲ ಸಣ್ಣ ವಿಷಯಗಳಲ್ಲಿಯೂ ಖುಷಿ ಹುಡುಕಿ, ಕಿಟಕಿಯಿಂದ ಬರುವ ಸೂರ್ಯನ ಕಿರಣಗಳನ್ನು ಕಂಡು ಖುಷಿ ಪಡಿ, ಇದನ್ನು ನೋಡಲು ಮತ್ತೆ ಒಂದು ದಿನ ನೀವು ಕಾಯಬೇಕು.
  • ಬದುಕಿದ್ದಕ್ಕೆ, ಖುಷಿ ಇರುವುದಕ್ಕೆ, ಊಟ, ನಿದ್ದೆ, ವಾಸಸ್ಥಳ ಇರುವುದಕ್ಕೆ ಧನ್ಯವಾದ ಹೇಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!