ಹರ್ಷ ಹತ್ಯೆ ಖಂಡಿಸಿ ಅಂಕೋಲಾದಲ್ಲಿ ಶಾಂತಿಯುತ ಮೆರವಣಿಗೆ

ಹೊಸದಿಗಂತ ವರದಿ, ಅಂಕೋಲಾ:

ಭಜರಂಗದಳ ಕಾರ್ಯಕರ್ತ ಹರ್ಷ ಅವರ ಹತ್ಯೆಯನ್ನು ಖಂಡಿಸಿ ಅಂಕೋಲಾ ತಾಲೂಕು ಭಜರಂಗದಳ ಹಾಗೂ ಜಯಕರ್ನಾಟಕ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಶಾಂತಿಯುತ ಮೆರವಣಿಗೆ ನಡೆಸಿ ತಹಶೀಲ್ಧಾರರ ಮೂಲಕ ರಾಜ್ಯಪಾಲರಿಗೆ ಮತ್ತು ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಹಿಂದುತ್ವ ಪರ ಹೋರಾಟಗಾರ ಹರ್ಷ ಅವರ ಹತ್ಯೆ ಹಿಂದೆ ಮೂಲಭೂತವಾದಿ ದುಷ್ಕರ್ಮಿಗಳ ಕೈವಾಡದವಿದ್ದು ಇಂತಹ ಹೇಯ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ದುಷ್ಕೃತ್ಯದ ಹಿಂದಿರುವ ಸಂಘಟನೆಗಳನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸರ್ಕಾರ ಎಸ್. ಡಿ.ಪಿ.ಐ, ಸಿ.ಎಫ್.ಐ ಮತ್ತು ಪಿ.ಎಫ್. ಐ ಸಂಘಟನೆಗಳನ್ನು ನಿಷೇದಿಸಬೇಕು
ಅಪರಾಧಿಗಳನ್ನು ಅತಿ ಶೀಘ್ರದಲ್ಲಿ ಬಂಧಿಸಿ ಹರ್ಷ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಲಾಗಿದೆ.
ಭಜರಂಗದಳದ ಸಂಚಾಲಕ ಕಿರಣ ನಾಯ್ಕ, ಜಯಕರ್ನಾಟಕ ಜಿಲ್ಲಾಧ್ಯಕ್ಷ ಸುನೀಲ ನಾಯ್ಕ, ಜಿಲ್ಲಾ ಉಸ್ತುವಾರಿ ಅಜೀತ ನಾಯಕ, ಪ್ರಮುಖರುಗಳಾದ ಧೀರಜ್ ಬಾನಾವಳಿಕರ, ನಿತ್ಯಾನಂದ ನಾಯ್ಕ, ವಿಕಾಸ ಖಾರ್ವಿ, ಪ್ರದೀಪ ನಾಯ್ಕ, ಅರುಣ ನಾಯ್ಕ, ಲಕ್ಷ್ಮೀಕಾಂತ ನಾಯ್ಕ, ಶರತ್ ಹರಿಕಂತ್ರ, ಸುನೀಲ ಬಾನಾವಳಿಕರ, ವಿಲಾಸ ನಾಯ್ಕ ಮೊದಲಾದವರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!