ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ, ಈಗ ಹಾಸನದ ಗಲ್ಲಿಗಲ್ಲಿಗಳಲ್ಲಿ ಸಿಸಿ ಕ್ಯಾಮರಾ ದಾಖಲೆ ವಶಕ್ಕೆ ಪಡೆದು ಪರಿಶೀಲನೆ ತೀವ್ರಗೊಳಿಸಿದೆ.
ಮೂಲಗಳ ಮಾಹಿತಿ ಪ್ರಕಾರ ಹಾಸನ ಜಿಲ್ಲೆಯ ಒಟ್ಟು 18 ಕಡೆಗಳಲ್ಲಿನ ಎಸ್‌ಐಟಿ ತಂಡ ಸಿಸಿ ಕೆಮರಾ ಪರಿಶೀಲನೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ನಿವಾಸ, ಕಚೇರಿಯಿಂದ ಈಗಾಗಲೇ ಪೆನ್‌ಡ್ರೈವ್, ಹಾರ್ಡ್‌ಡಿಸ್ಕ್, ಕಂಪ್ಯೂಟರ್‌ಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಸಾಕ್ಷಿಗಳಿಗಾಗಿ ಇಂಚಿಂಚು ಶೋಧದಲ್ಲಿ ತೊಡಗಿದ್ದಾರೆ.
ಇದಲ್ಲದೆ ತಾವು ವಶಕ್ಕೆ ಪಡೆದಿರುವ ಎಲೆಕ್ಟ್ರಾನಿಕ್ ಹಾರ್ಡ್ ಡಿಸ್ಕ್‌ಗಳಲ್ಲಿ ವೀಡಿಯೋಗಳು ದ್ದವೇ? ಅವುಗಳನ್ನು ಅಳಿಸಿಹಾಕಲಾಗಿದೆಯೇ ಎಂಬ ಬಗ್ಗೆ ಕೂಡಾ ಪರಿಶೀಲನೆ ನಡೆಸಲು ಅವುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ.