ಪೆನ್‌ಡ್ರೈವ್‌ ಕೇಸ್‌: ಅರ್ಜಿ ತಿರಸ್ಕೃತಗೊಂಡ ಆರೋಪಿಗಳನ್ನು ಎಸ್​ಐಟಿ ಯಾಕೆ ಬಂಧಿಸಿಲ್ಲ? ರೇವಣ್ಣ ವಕೀಲರ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಜ್ವಲ್ ರೇವಣ್ಣ, ಅಶ್ಲೀಲ ವಿಡಿಯೋಗಳ ಪ್ರಕರಣದಲ್ಲಿ ರೇವಣ್ಣ ಅವರನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಹಾಸನದ ಹೆಣ್ಣು ಮಕ್ಕಳನ್ನು ಹರಾಜು ಹಾಕುತ್ತಿರುವವರ ವಿರುದ್ಧ ಸರಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೇವಣ್ಣ ಪರ ವಕೀಲರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಪೆನ್ ಡ್ರೈವ್ ಹಾಗೂ ವಿಡಿಯೋ ಶೇರ್ ಮಾಡಿದ್ದ ಕಾರ್ತಿಕ್, ಪುಟ್ಟರಾಜು ಅಲಿಯಾಸ್ ಪುಟ್ಟಿ, ಚೇತನ್, ನವೀನ್ ಗೌಡ ಹಾಗೂ ಶರತ್ ವಿರುದ್ಧ ಎಫ್ ಐಆರ್ ದಾಖಲಾಗಿ 15 ದಿನಗಳಾಗಿವೆ. ಈ ಐವರ ವಿರುದ್ಧ ರಾಜ್ಯ ಸರ್ಕಾರವಾಗಲಿ, ಎಸ್ ಐಟಿಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಚ್.ಡಿ.ರೇವಣ್ಣ ಪರ ವಕೀಲರು ಆಕ್ರೋಶ ವ್ಯಕ್ತಪಡಿಸಿದರು.

ಪುಟ್ಟರಾಜು ಅಲಿಯಾಸ್ ಪುಟಿ, ಕಾರ್ತಿಕ್, ಚೇತನ್ ಮತ್ತು ನವೀನ್ ಗೌಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಾಸನ ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಾಲಯ ಇದನ್ನು ಜಾಮೀನು ರಹಿತ ಪ್ರಕರಣ ಎಂದು ಪರಿಗಣಿಸಿದೆ. ಆದರೆ ಸರ್ಕಾರಕ್ಕೆ ಇದು ಏಕೆ ಅರ್ಥವಾಗುತ್ತಿಲ್ಲ? ಸೆಕ್ಷನ್ 24/33 ರ ಅಡಿಯಲ್ಲಿ ಎಫ್‌ಐಆರ್ ಇದ್ದರೂ ಅವರನ್ನು ಏಕೆ ಬಂಧಿಸಿಲ್ಲ ಎಂದು ವಕೀಲರು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!