ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹೊಳೆ, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಪೆನ್ ಗಂಗಾ ನದಿ ಕೂಡ ರಭಸವಾಗಿ ಹರಿಯುತ್ತಿದ್ದಾಳೆ. ಭಾರೀ ಪ್ರವಾಹದ ನೀರು ಆದಿಲಾಬಾದ್ ಜಿಲ್ಲೆಯ NH44ಗೆ ನುಗ್ಗಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ತೆಲಂಗಾಣ ಮತ್ತು ಮಹಾರಾಷ್ಟ್ರದ ಎರಡೂ ಕಡೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೆನ್ ಗಂಗಾ ಡೊಳ್ಳಾರಿನಲ್ಲಿ ಅಂತಾರಾಜ್ಯ ಸೇತುವೆಗಳನ್ನು ಮುಟ್ಟಿ ರಭಸವಾಗಿ ಹರಿಯುತ್ತಿದೆ. ಪೆನ್ ಗಂಗಾದಲ್ಲಿ ನೀರಿನ ಹರಿವು ಗಂಟೆ ಗಂಟೆಗೂ ಹೆಚ್ಚುತ್ತಿದೆ. ಒಳಹರಿವು 4 ಲಕ್ಷ 80 ಸಾವಿರ ಕ್ಯೂಸೆಕ್ ಇದ್ದು, ಚೆನಕ ಕೊರಟ ಪಂಪ್ ಹೌಸ್ ಜಲಾವೃತವಾಗಿದೆ.
ಪಿಪ್ಪರ್ ವಾಡಾ ಟೋಲ್ ಪ್ಲಾಜಾದಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಎನ್ ಎಚ್ 44 ಬಂದ್ ಆಗಿರುವುದರಿಂದ ಪೆನ್ ಗಂಗಾ ಹರಿವು ಕಡಿಮೆಯಾಗುವವರೆಗೆ ಹೆದ್ದಾರಿ ಮೇಲೆ ಬರದಂತೆ ಅಧಿಕಾರಿಗಳು ಮತ್ತು ಪೊಲೀಸರು ಸಲಹೆ ನೀಡುತ್ತಿದ್ದಾರೆ. ನಿನ್ನೆ ರಾತ್ರಿಯಿಂದ NH44 ಹೆದ್ದಾರಿಯಲ್ಲಿ ಪ್ರಯಾಣಿಕರು ತೊಂದರೆ ಎದುರಿಸುತ್ತಿದ್ದಾರೆ. ಪೆಂಗಣ್ಣ ಜಲಾನಯನ ಪ್ರದೇಶದ ಹಲವು ಗ್ರಾಮಗಳಿಗೆ ಹಿನ್ನೀರು ತಲುಪುತ್ತಿದೆ.