ಮಸೀದಿಗಳ ಧ್ವನಿವಧ೯ಕಗಳಿಂದ ಜನರಿಗೆ ಕಿರಿಕಿರಿ: ಸಿದ್ದಲಿಂಗ ಶ್ರೀ

ಹೊಸದಿಗಂತ ವರದಿ, ಕಲಬುರಗಿ:

ರಾಜ್ಯದಲ್ಲಿನ ಮಸೀದಿಗಳ ಮೇಲೆ ಇರುವಂತಹ ಧ್ವನಿವಧ೯ಕಗಳಿಂದ ಜನರಿಗೆ ಕಿರಿಕಿರಿ ಉಂಟಾಗುತ್ತಿದ್ದು,ಇದರ ಮೇಲೆ ನಿಷೇಧ ಹೇರಬೇಕೆಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಂಜಾನ್ ನಿಮಿತ್ತ ದಿನದ ಹಲವು ಬಾರಿ ಧ್ವನಿವಧ೯ಕ ಜೊತೆಗೆ ಸೈರನ್ ಕೂಡ ಹಾಕುತ್ತಾರೆ. ಇದರಿಂದ ಮಕ್ಕಳಿಗೆ,ಓದುಗರಿಗೆ, ವಯಸ್ಕರಿಗೆ ಮತ್ತು ಸಾವ೯ಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿವೆ ಎಂದರು.

ಮಹಾರಾಷ್ಟ್ರ ದಲ್ಲಿ ಮಸೀಧಿಗಳ ಮೇಲೆ ಮೈಕ್ ನಿಷೇಧಿಸಲು ಮಹಾರಾಷ್ಟ್ರ ನವ ನಿಮಾ೯ಣ ಪಕ್ಷದ ಮುಖಂಡ ರಾಜ್ ಠಾಕ್ರೆ ಅಲ್ಲಿಯ ಸರಕಾರಕ್ಕೆ ಒತ್ತಾಯಿಸಿದ್ದು, ಠಾಕ್ರೆ ನಿಲುವನ್ನು ಶ್ರೀಗಳು ಸಮಥಿ೯ಸಿಕೊಂಡಿದ್ದಾರೆ.

ಕೂಡಲೇ ರಾಜ್ಯ ಸರಕಾರ ಮಧ್ಯೆ ಪ್ರವೇಶ ಮಾಡಿ, ಮಸೀಧಿಗಳ ಮೇಲಿರುವ ಧ್ವನಿವಧ೯ಕಗಳ ನಿಷೇಧಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಇನ್ನೂ ಇದೇ ವೇಳೆ ಶ್ರೀ ರಾಮ ಸೇನೆಯ ಮೈಕ್ ತೆರವಿಗೆ ಆಗ್ರಹಿಸಿದ ವಿಚಾರವಾಗಿ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಪ್ರತಿಕ್ರಿಯೆ ನೀಡಿದ್ದಾರೆ.

ಸರಕಾರ ಪ್ರತಿಯೊಂದು ಕ್ಷೇತ್ರದಲ್ಲಿ ವಿಫಲವಾಗಿದೆ. ಜನರ ಮಧ್ಯೆ ಜಗಳ ಹಚ್ಚುವ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದ್ದಾರೆ.

ಹಿಜಾಬ್ ಆಯಿತು, ಹಲಾಲ್ ಆಯಿತು, ಇದೀಗ ಮಸೀಧಿಗಳ ಮೇಲೆ ಕಣ್ಣು ಬಿದ್ದಿವೆ. ಚುನಾವಣೆ ಹತ್ತಿರ ಬಂದಾಗ,ಬಿಜೆಪಿ ಯವರು ಒಂದಿಲ್ಲವೊಂದು ವಿವಾದ ಹುಟ್ಟಿ ಹಾಕುತ್ತಾರೆ ಎಂದು ಆರೋಪ ಮಾಡಿದ್ದಾರೆ.

ಮಸೀಧಿಗಳ ಮೇಲೆ ಇರುವ ಮೈಕ್,ನಿನ್ನೆ ಮೊನ್ನೆದಲ್ಲ. ಏಕಾಏಕಿ ಈ ವಿವಾದ ಯಾಕೆ ಬಂದಿದೆ ? ಸರ್ಕಾರ ಈ ಬೇಡಿಕೆಗೆ ಮಣಿಯಬಾರದು ಎಂದು ಹೇಳಿದರು.

ಅಜಾ ಹೇಳಿದ ಮೇಲೆಯೇ ಜನರು ಎಚ್ಚರವಾಗುತ್ತಾರೆ.ರಂಜಾನ್ ವೇಳೆಯಲ್ಲಿ ಸೈರನ್ ಕೊಡುವುದು ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ ಎಂದರು.

ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡುತ್ತೇವೆ. ಆದರೆ ಪೂರ್ಣ ಪ್ರಮಾಣದಲ್ಲಿ ಅಜಾ ನಿಲ್ಲಿಸಲು ಸಾಧ್ಯವಿಲ್ಲ ಎಂದ ಅವರು, ಧಾರ್ಮಿಕ ಭಾವನೆಗಳಿಗೆ ಮನ್ನಣೆ ನೀಡಿ ಮೈಕ್ ಸೌಂಡ್ ಕಡಿಮೆ ಇಟ್ಟು ಅಜಾ ಕೊಡಲು ಅನುವು ಮಾಡಿಕೊಡಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!