DEC BORNS | ಡಿಸೆಂಬರ್‌ನಲ್ಲಿ ಹುಟ್ಟಿದವರು ಜಗಮೊಂಡರಂತೆ! ಇನ್ಯಾವ ಗುಣಗಳಿವೆ ನೋಡಿ..

ಪ್ರತಿ ತಿಂಗಳಿನಲ್ಲಿ ಹುಟ್ಟಿದವರಿಗೂ ವಿಭಿನ್ನವಾದ ಗುಣಲಕ್ಷಣಗಳು ಇರುತ್ತದೆ. ರಾಶಿ, ನಕ್ಷತ್ರ ಆಧರಿಸಿದ ಗುಣ ಲಕ್ಷಣಗಳು ನಿಜವಾಗಿಯೇ ಇರುತ್ತವೆ, ಹಾಗೇ ತಿಂಗಳು ಆಧರಿಸಿದ ಗುಣಗಳು ಸಾಕಷ್ಟು ಬಾರಿ ನಿಜವಾಗುತ್ತವೆ. ಡಿಸೆಂಬರ್‌ನಲ್ಲಿ ಹುಟ್ಟಿದವರ ಗುಣಲಕ್ಷಣಗಳಿವು..

ಇವರು ಫನ್‌ಲವಿಂಗ್‌, ಅಡ್ವೆಂಚರಸ್‌, ಜನ ಅಂದ್ರೆ ಇಷ್ಟ.

ಇವರ ಕೈಯಲ್ಲಿ ಎಷ್ಟೋ ಉಡ್ಡು ಇದ್ದರೂ ಅದನ್ನು ಇನ್ನೊಬ್ಬರಿಗೆ ಕೊಡ್ತಾರೆ, ದಾನ ಧರ್ಮ, ಕರುಣೆ ಸದಾ ಇದೆ.

ಸದಾ ಫಿಲ್ಟರ್‌ ಇಲ್ಲದೆ ಮಾತನಾಡುತ್ತಾರೆ, ಪ್ರಾಮಾಣಿಕವಾಗಿ ಇರುತ್ತಾರೆ.

ಜಗಮೊಂಡರು, ಯಾವುದೇ ವಿಷಯ ಅರ್ಥಮಾಡಿಕೊಳ್ಳೋದು ಬೇಡ ಎಂದು ಡಿಸೈಡ್‌ ಮಾಡಿದರೆ ಅದನ್ನು ಅರ್ಥಮಾಡಿಕೊಳ್ಳೋಕೆ ಹೋಗೋದಿಲ್ಲ. ನಾವೇ ರೈಟ್‌ ಅಂತಾರೆ.

ಕೆಲವೊಮ್ಮೆ ಧಿಮಾಕಿನ ವ್ಯಕ್ತಿಗಳು ಅನಿಸ್ತಾರೆ, ತಾಳ್ಮೆ ಕೂಡ ಕಡಿಮೆ.

ಇವರನ್ನು ರೂಲ್ಸ್‌ ಹಾಕಿ ಕಟ್ಟಿಹಾಕೋಕೆ ಸಾಧ್ಯವಿಲ್ಲ. ಫ್ರೀ ಸ್ಪಿರಿಟ್ಸ್‌, ತಮಗನಿಸಿದ್ದನ್ನು ಮಾಡುತ್ತಾ ಹೋಗುತ್ತಾರೆ.

ಸ್ನೇಹಕ್ಕೆ ಫಸ್ಟ್‌ ಪ್ರಿಫರೆನ್ಸ್‌, ಜೀವನದ ಯಾವ ಕಾಲಘಟ್ಟದಲ್ಲೂ ಸ್ನೇಹಿತರಿಲ್ಲದೆ ಇರೋದಿಲ್ಲ.

ಇವರು ಅತ್ಯುತ್ತಮ ಪೋಷಕರಾಗ್ತಾರೆ, ಇವರ ಮಕ್ಕಳಿಗೆ ಸರಿಯಾದ ಗೈಡೆನ್ಸ್‌ ಕೊಡೋದ್ರಲ್ಲಿ ಎಂದೂ ತಪ್ಪೋದಿಲ್ಲ.

ಇವರ ಸಂಘ ಫನ್‌, ಜೊತೆಗೆ ಇದ್ದು ಖುಷಿಪಟ್ಟು,ನಕ್ಕು ನಲಿಯಬಹುದು.

ಇವರು ಸಮಸ್ಯೆಗಳನ್ನು ಸಾಲ್ವ್‌ ಮಾಡೋದಕ್ಕೆ ಹೆದರುತ್ತಾರೆ. ಪ್ರತೀ ದೊಡ್ಡ ಸಮಸ್ಯೆ ಬಂದಾಗಲೂ ಓಡಿ ಹೋಗ್ತಾರೆ.

ಸದಾ ಏನನ್ನಾದರೂ ಸಾಧಿಸಬೇಕು ಅನ್ನೋ ಆಸೆ ಇರುತ್ತದೆ. ಹಾಗೇ ಸಾಧನೆ ಮಾಡ್ತಾರೆ ಕೂಡ.

ಎಷ್ಟೇ ಹಣವಂತರಾದ್ರೂ ಯಾರನ್ನೂ ಕೀಳಾಗಿ ನೋಡೋದಿಲ್ಲ. ಡೌನ್‌ ಟು ಅರ್ಥ್‌ ಸ್ವಭಾವ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!