ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಜಿಲ್ಲಾ ಧರ್ಮಜಾಗರಣ ಗತಿವಿಧಿ ಸಂಯೋಜಕರಾಗಿದ್ದ ಪ್ರಸಾದ್ ಬೆಳಾಲ್ (38) ವಿಧಿವಶರಾಗಿದ್ದಾರೆ.
ಇವರು ಕಳೆದ ಕೆಲವು ವರ್ಷಗಳ ಹಿಂದೆ ಮಂಡ್ಯ, ಸುಳ್ಯದಲ್ಲಿ ತಾಲೂಕು ಪ್ರಚಾರಕರಾಗಿದ್ದರು.
ಅವರು ತಮ್ಮ ಮನೆಯ ಸಮೀಪದಲ್ಲಿನ ನೇತ್ರಾವತಿ ನದಿಯಲ್ಲಿ ಆಕಸ್ಮಿಕವಾಗಿ ಬಿದ್ದು ನಿಧನ ರಾಗಿದ್ದಾರೆ.
ಮೃತರು ತಂದೆ, ತಾಯಿ, ಪತ್ನಿ, ಮಗು, ಒಬ್ಬ ಸಹೋದರ, ಇಬ್ಬರು ಸಹೋದರಿಯರ ಸಹಿತ ಅಪಾರ ಸಂಘ ಬಂದು ಗಳನ್ನು ಅಗಲಿದ್ದಾರೆ.