Friday, March 24, 2023

Latest Posts

MARCH BORNS | ಮಾರ್ಚ್‌ನಲ್ಲಿ ಹುಟ್ಟಿದವರಿಗೆ ಕರುಣೆ ಜಾಸ್ತಿಯಂತೆ, ಇದ್ದದ್ದೆಲ್ಲಾ ಕೊಟ್ಟುಬಿಡ್ತಾರೆ.. ಇನ್ಯಾವ ಗುಣಗಳಿವೆ ನೋಡಿ..

ಮಾರ್ಚ್ ತಿಂಗಳಲ್ಲಿ ಹುಟ್ಟಿದವರಿಗೆ ಸಾಕಷ್ಟು ವಿಭಿನ್ನವಾದ ಗುಣಗಳಿವೆ, ಇವರು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳೂ ಆಗ್ತಾರಂತೆ, ಮಾರ್ಚ್‌ನಲ್ಲಿ ಹುಟ್ಟಿದವರಿಗೆ ಯಾವ ಗುಣಗಳಿವೆ, ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಅಂದರೆ ಇದನ್ನು ಓದಿ..

 • ಇವರಿಗೆ ಇವರೇ ಬಾಸ್, ಬೇರೆಯವರ ಕೆಳಗೆ ಕೆಲಸ ಮಾಡೋದು ಇಷ್ಟ ಇಲ್ಲ.
 • ಯಾವಾಗಲೂ ಸಕಾರಾತ್ಮಕ ಯೋಜನೆ ಇರುವಂತವರು
 • ಉದಾರ ಮನೋಭಾವ ಇವರದ್ದು, ಇದ್ದದ್ದೆಲ್ಲಾ ಕೊಟ್ಟು ಕೂತುಬಿಡ್ತಾರೆ.
 • ಸ್ವಾತಂತ್ರ್ಯ ಬೇಕೇ ಬೇಕು, ಇವರನ್ನು ಒಂದು ಕಡೆ ಕಟ್ಟಿಹಾಕೋಕೆ ಆಗೋದಿಲ್ಲ.
 • ಎನರ್ಜಿ ಚಿಲುಮೆ ಇವರು, ಇವರು ಬಂದ್ರೆ ಎಲ್ಲಾ ಕಡೆ ಒಂದು ಕಳೆ ಇರುತ್ತದೆ.
 • ಕ್ರಿಯೇಟಿವ್ ಆದ ವ್ಯಕ್ತಿಗಳಿವರು, ಎಲ್ಲಾ ವಿಭಿನ್ನ ಆಲೋಚನೆಗಳೇ.
 • ಸ್ವಲ್ಪ ಬೈದರೂ ನೋವಾಗುತ್ತದೆ, ಸೆನ್ಸಿಟಿವ್ ಜನರು.
 • ಧೈರ್ಯಶಾಲಿಗಳು, ಯಾರೂ ನಾನು ಮಾಡೋದಿಲ್ಲ ಅಂತ ಹಿಂದೆ ಸರೀತಾರೋ ಅಂಥ ಕೆಲಸವನ್ನೇ ಹುಡುಕಿ ಮಾಡ್ತಾರೆ.
 • ನಂಬಿಕಸ್ತ ಜನರು, ನೀವು ಕೆಲಸಕ್ಕೆ ಸಂಬಂಧಗಳಿಗೆ ಎಲ್ಲಾ ವಿಷಯದಲ್ಲೂ ಇವರನ್ನು ನಂಬಬಹುದು.
 • ನೋಡೋದಕ್ಕೆ ಅಂದವಾಗಿರದೇ ಇದ್ರೂ ಅಟ್ರಾಕ್ಟೀವ್ ಆಗಿ ಇರ‍್ತಾರೆ.
 • ಇವರನ್ನು ನೋಡಿದಾಗಲೆಲ್ಲಾ ಏನಾದ್ರೂ ಸೀಕ್ರೆಟ್ ಹೈಡ್ ಮಾಡ್ತಿದ್ದಾರಾ ಅಂತ ಅನಿಸುತ್ತದೆ.
 • ಎಲ್ಲವನ್ನೂ ಹೊಗಳಿ ಹೇಳ್ತಾರೆ, ಒಳ್ಳೆ ಮಾತನಾಡ್ತಾರೆ.
 • ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳೋದಿಲ್ಲ, ಎಲ್ಲವನ್ನೂ ಒಳಗೇ ಇಟ್ಟುಕೊಳ್ತಾರೆ.
 • ಕಲ್ಲು ಮನಸ್ಸು ಕೆಲ ವಿಷಯದಲ್ಲಿ ಏನಂದ್ರೂ ಕರಗೋದಿಲ್ಲ.
 • ಸುಲಭವಾಗಿ ಎಲ್ಲವನ್ನೂ ನಂಬಿ ಮೋಸ ಹೋಗ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!