ಬೇರೆ ಬೇರೆ ತಿಂಗಳಲ್ಲಿ ಹುಟ್ಟಿದವರ ಗುಣಲಕ್ಷಣಗಳು ಬೇರೆ ಬೇರೆ ರೀತಿ ಇರುತ್ತವೆ, ಜನರು ಹುಟ್ಟಿದ ತಿಂಗಳಿನಿಂದ ಅವರ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು. ಹಾಗೇ ಮೇ ತಿಂಗಳಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತವೆ, ಇಲ್ಲಿದೆ ಮಾಹಿತಿ..
- ಇವರು ಅತೀ ಬುದ್ಧಿವಂತರು
- ಆಸೆಗಳು ಬೆಟ್ಟದಷ್ಟು
- ಇವರನ್ನು ಸುಲಭವಾಗಿ ನಂಬಬಹುದು, ಎಂದಿಗೂ ಮೋಸ ಮಾಡೋದಿಲ್ಲ.
- ಮಾತನಾಡುವ ಕಲೆ ಇವರಿಗಿದೆ, ಸೂಕ್ಷ್ಮವಾಗಿ ಮಾತನಾಡುವ ಅಭ್ಯಾಸ ಇವರದ್ದು
- ಇವರ ಸ್ಟೈಲ್ ಹಾಗೂ ಪರ್ಸನಾಲಿಟಿ ಮ್ಯಾಗ್ನೆಟ್‌ನಂತೆ ಅಟ್ರಾಕ್ಟ್ ಮಾಡುತ್ತದೆ.
- ಯಾವಾಗಲೂ ತಮ್ಮ ಗುರಿಯ ಬಗ್ಗೆ ಗಮನ ಇಟ್ಟಿರುತ್ತಾರೆ. ನಿಧಾನವಾಗಿ ರೇಸ್ ಮುಗಿಸುವ ಚಾಣಾಕ್ಷರು.
- ಹಠಮಾರಿಗಳಾಗಿರುತ್ತಾರೆ, ಬೇಕೆಂದಿದ್ದು ಪಡೆದೇ ಪಡೆಯುತ್ತಾರೆ.
- ಇವರಿಗೆ ಕೋಪ ಬರಿಸೋದು ತುಂಬಾನೇ ಸುಲಭ
- ಮುಜುಗರ ಸ್ವಭಾವದವರು
- ಮಾನಸಿಕ ಹಾಗೂ ದೈಹಿಕವಾಗಿ ಇವರು ಸುಂದರ
- ಟ್ರಾವೆಲ್ ಮಾಡೋದು ಪಂಚಪ್ರಾಣ
- ಉಸಿರಾಟದ ತೊಂದರೆ, ತಲೆನೋವು ಬಾಧಿಸುತ್ತದೆ.
- ಒಬ್ಬಂಟಿ ಜೀವನ ಇಷ್ಟವಿಲ್ಲ
- ಭಾವನೆಗಳು ಆಳವಾಗಿ ಇರುತ್ತವೆ ಆದರೆ ಬಾಯಿ ಬಿಟ್ಟು ಹೇಳೋದಿಲ್ಲ.
- ದುಡ್ಡು ಕೈಗೆ ಹತ್ತೋದಿಲ್ಲ
- ಯಾವ ಕೆಲಸಕ್ಕಾಗಲಿ ಧೈರ್ಯವಾಗಿ ಮುನ್ನಡೆಯುತ್ತಾರೆ.
- ಪ್ರೀತಿ ಮಾಡ್ತಾರೆ ಆದರೆ ಹೇಳೋದಿಲ್ಲ.