June 27, 2026
Saturday, June 27, 2026
spot_img

ವೀಕೆಂಡ್‌ ಬಂತೆಂದು ಕಾಫಿನಾಡಿಗೆ ದಾಪುಗಾಲಿಟ್ಟ ಜನ! ಸೀತಾಳಯ್ಯನಗಿರಿ ಬಳಿ ಸಿಕ್ಕಿಹಾಕಿಕೊಂಡ ನೂರಾರು ಕಾರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾಜಿಕ ಜಾಲತಾಣಗಳಲ್ಲಿ ಯಾವೆಲ್ಲಾ ಜಾಗಗಳು ವೈರಲ್‌ ಆಗಿವೆಯೋ ಆ ಜಾಗದಲ್ಲಿ ವೀಕೆಂಡ್‌ ಕ್ರೌಡ್‌ ಇಲ್ಲದೇ ಇರೋಕೆ ಚಾನ್ಸೇ ಇಲ್ಲ!

ಕಾಫಿನಾಡು ಚಿಕ್ಕಮಗಳೂರಿನ ಅಂದದ ತಾಣಗಳಾದ ಮುಳ್ಳಯನಗಿರಿ, ದತ್ತಪೀಠ, ಗಾಳಿಕೆರೆ ಸುತ್ತಮುತ್ತ ಇಂದು ಭಾರೀ ಟ್ರಾಫಿಕ್‌ ಜಾಮ್‌ ಆಗಿದೆ. ಸೀತಾಳಯ್ಯನಗಿರಿಯ ಬಳಿ ಟ್ರಾಫಿಕ್‌ನಿಂದಾಗಿ ನೂರಾರು ಕಾರುಗಳು ಸಿಕ್ಕಿಹಾಕಿಕೊಂಡಿವೆ. ಪಂಡರವಳ್ಳಿ – ಸೀತಾಳಯ್ಯನಗಿರಿ ಬಳಿ ಗಿರಿಯ ಕಿರಿದಾದ ರಸ್ತೆಯಲ್ಲಿ ಸಿಲುಕಿ ಗಂಟೆಗಟ್ಟಲೇ ಪ್ರವಾಸಿಗರು ಹೈರಾಣಾಗಿದ್ದಾರೆ. ಪ್ರವಾಸಿಗರು ಯಾಕಾದರೂ ಬಂದೆವೋ ಎನ್ನುವಷ್ಟು ಬೇಸ್ತುಬಿದ್ದಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ಆನ್‌ಲೈನ್‌ ಟಿಕೆಟ್ ನಿಯಮ ಗಾಳಿಗೆ ತೂರಲಾಗಿದೆ. ಒಂದು ಕಾರಿಗೆ 1000-1500 ರೂ. ಹಣ ಪಡೆದು ಪ್ರವಾಸಿಗರ ಕಾರನ್ನು ಗಿರಿಭಾಗಕ್ಕೆ ಬಿಡಲಾಗುತ್ತಿದೆ. ಇದರಿಂದಾಗಿ ಟ್ರಾಫಿಕ್‌ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಟ್ರಾಫಿಕ್‌ ಕ್ಲಿಯರ್‌ ಮಾಡಲು ಪೊಲೀಸರು, ಚೆಕ್‌ಪೋಸ್ಟ್‌ ಸಿಬ್ಬಂದಿ ಪರದಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !