ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಗಳ ಕುರಿತಾಗಿ ಮಾಧ್ಯಮಗಳ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗರಂ ಆಗಿ ಉತ್ತರ ನೀಡಿದ ಘಟನೆಗೆ ಸೋಮವಾರ ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹ ಪರಿಸರ ಸಾಕ್ಷಿಯಾಗಿದೆ!
ಇಷ್ಟಕ್ಕೂ ಆಗಿದ್ದೇನು ಎಂದರೆ ಬಿಜೆಪಿ ಆಪರೇಷನ್ ಮಾಡಿರಲಿಲ್ಲ. ಮೈತ್ರಿ ಸರ್ಕಾರ ಕೆಡವಿದ್ದೇ ನಾವು. ಈಗ ಬಿಜೆಪಿ ಆಪರೇಶನ್ ಕಮಲ ಮಾಡುತ್ತಿದೆ ಎಂಬುದು ಶಿವಕುಮಾರ್ ಕೃಪಾಪೋಷಿತ ನಾಟಕ ಮಂಡಳಿಯ ಸೃಷ್ಟಿ ಎಂಬ ಜಾರಕಿಹೊಳಿ ಆರೋಪಗಳಿಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಚುನಾವಣೆಯಲ್ಲಿ ರಾಜ್ಯದ ಜನ ಏನು ತೀರ್ಪು ನೀಡಬೇಕೋ ಅದನ್ನು ನೀಡಿದ್ದಾರೆ. ಸದ್ಯಕ್ಕೆ ನಮಗೆ ಮಾಡಲು ಅನೇಕ ಕೆಲಸಗಳಿವೆ. ಆ ಕೆಲಸ ಮಾಡುತ್ತಿದ್ದೇವೆ ಎಂದು ‘ಪ್ರತಿಕ್ರಿಯೆ’ ನೀಡಿದ್ದಾರೆ.