370‌ ಆರ್ಟಿಕಲ್ ತೆಗೆದ ಬಳಿಕ ಕಾಶ್ಮೀರ ಜನರಿಗೆ ಸಿಕ್ಕಿದೆ ನೆಮ್ಮದಿಯ ಬದುಕು: ಹೆಚ್.ಡಿ.ದೇವೇಗೌಡ

ಹೊಸ ದಿಗಂತ ವರದಿ, ಹಾಸನ :

ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ ಶಾ ಅವರು 370ಆರ್ಟಿಕಲ್ ತೆಗೆದ ಮೇಲೆ ಜನಸಾಮಾನ್ಯರು ಬೀದಿಯಲ್ಲಿ ನೆಮ್ಮದಿಯಿಂದ ಓಡಾಡುತ್ತಿದ್ದಾರೆ ಎಂದು ಮಾಜಿಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ತಿಳಿಸಿದರು.

ನಾಲ್ಕು ತಿಂಗಳ ಮಾಜಿಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡರು ಬೆಂಗಳೂರುನಿಂದ ಹೆಲಿಕಾಪ್ಟರ್ ಮೂಲಕ ಹೊಳೆನರಸೀಪುರದ ಹೇಮಾವತಿ ಕ್ರೀಡಾಂಗಣದ ಹೆಲಿಪ್ಯಾಡ್‌ಗೆ ಆಗಮಿಸಿ ಬಳಿಕ ರಸ್ತೆ ಮಾರ್ಗವಾಗಿ ಹೊಳೆನರಸೀಪುರ ತಾಲ್ಲೂಕಿನ, ಹಳೆಕೋಟೆ ಗ್ರಾಮದ, ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಕಡೆ ಶ್ರಾವಣ ಶನಿವಾರದ ಹಿನ್ನೆಲೆ ಶ್ರೀ ರಂಗನಾಥಸ್ವಾಮಿ ಗೆ ವಿಶೇಷ ಪೂಜೆ ಸಲ್ಲಿಸಿದರು.

ದೇವೇಗೌಡರಿಗೆ ಪೂರ್ಣ ಕುಂಭ ಸ್ವಾಗತ ಕೋರಿದ ಅರ್ಚಕರು ದೊಡ್ಡ ಗೌಡ್ರಿಗೆ ಪುತ್ರ ಹಾಗೂ ಮಾಜಿ ಸಚಿವ ಹೆಚ್‌.ಡಿ.ರೇವಣ್ಣ, ಮೊಮ್ಮಗ ಹಾಗೂ ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಪೂಜಾ ಕಾರ್ಯದಲ್ಲಿ ಭಾಗಿಯಾದರು.

ಬಳಿಕ ಸುದ್ದಿಗಾರರೊಂದಿಗೆ ದೇವೇಗೌಡರು ಮಾತನಾಡಿ, ಕಾಶ್ಮೀರದಲ್ಲಿರುವ ಶಿವನ ದೇವಾಲಯಕ್ಕೆ 230 ಮೆಟ್ಟಿಲು ಇದೆ ಹತ್ತುವುದು ಕಷ್ಟ, ನಾನು ಮೂವತ್ತು ಮೆಟ್ಟಿಲು ಹತ್ತಿದೆ. ಆಮೇಲೆ ಆಗಲಿಲ್ಲ, ಆಗ ಸಿಆರ್‌ಪಿಎಫ್ ಯೋಧರು ದೇವಾಲಯಕ್ಕೆ ಕರೆದುಕೊಂಡು ಹೋದಾಗ ಪೂಜೆ ಸಲ್ಲಿಸಿದೆನು. ನಾಥದ್ವಾರದಲ್ಲಿ ಕೃಷ್ಣನ ದೇವಾಲಯ ಇದ್ದು, ಬಹಳ ಪ್ರಸಿದ್ದವಾದದೇವಾಲಯ ಅದು, ಅಲ್ಲಿಗೂ ಹೋಗಿದ್ದೆ ಎಂದು ಹೇಳಿದರು.

ಮೋದಿಯವರು 370 ಆರ್ಟಿಕಲ್ ರದ್ದು ಮಾಡಿದ್ದಾರೆ. ಮೋದಿಯವರು ಬಂದ ಮೇಲೆ ಟೆರೆರಿಸ್ಟ್‌ನ್ನು ಕಂಟ್ರೋಲ್ ಮಾಡಿದ್ದಾರೆ, ಈಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ, ಮೋದಿ ಮತ್ತು ಶಾ ಕಠಿಣವಾದ ಕ್ರಮ ತೆಗೆದುಕೊಂಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಹಿಂದೆ ನಡೆಯುತ್ತಿದ್ದ ಅಕ್ರಮವನ್ನು ಸ್ವಲ್ಪ ಮಟ್ಟಿಗೆ ಸುಧಾರಣೆ ಮಾಡಿದ್ದಾರೆ. ಜನ ಬೀದಿಯಲ್ಲಿ ನೆಮ್ಮದಿಯಿಂದ ಓಡಾಡುತ್ತಿದ್ದಾರೆ, ಈಗ ಅಲ್ಲಿ ಚುನಾವಣೆ ನಡೆಯುತ್ತಿದೆ. ಮೋದಿಯವರು, ಶಾ 370ಆರ್ಟಿಕಲ್ ತೆಗೆದ ಮೇಲೆ ಜನಸಾಮಾನ್ಯರು ಬೀದಿಯಲ್ಲಿ ನೆಮ್ಮದಿಯಿಂದ ಓಡಾಡುತ್ತಿದ್ದಾರೆ, ಓಟು ಯಾರಿಗೆ ಹಾಕ್ತಾರೋ ಬಿಡ್ತರೋ ಕೇಳಬಾರದು. ಮೋದಿಯವರು ಒಳ್ಳೆಯ ಕೆಲಸ ಮಾಡಿದ್ದಾರೆ, ನೆಮ್ಮದಿಯಿಂದ ಅಲ್ಲಿನ ಜನರು ಮತ ಹಾಕುತ್ತಾರೆ ಎಂದರು.

ಇನ್ನೂ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ವಿಚಾರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ನಾನು ಕರ್ನಾಟಕದ ಯಾವುದೇ ವಿಷಯ ಮಾತನಾಡಲ್ಲ, ಈಗ ಮಾತನಾಡುವುದಿಲ್ಲ, ಸಮಯ ಬರುತ್ತೆ ಆಗ ಮಾತನಾಡುತ್ತೀನಿ, ಹಾಸನಕ್ಕೆ ಬರುತ್ತೇನೆ, ರಾಜ್ಯಾದ್ಯಂತ ಪ್ರವಾಸ ಮಾಡುವೆನು. ಮಂಡಿ ನೋವು ಬಿಟ್ಟರೆ ಆರೋಗ್ಯ ಸರಿಯಿದೆ ಎಂದರು.

ಕಾಂಗ್ರೆಸ್‌ನಿಂದ ರಾಜಭವನ ಚಲೋ ವಿಚಾರದ ಪ್ರಶ್ನೆಗೆ ಉತ್ತರಿಸಿ, ಅದರ ಬಗ್ಗೆ ಈಗ ನಾನು ಮಾತನಾಡಲ್ಲ ಮುಂದೆ ಮಾತನಾಡುವ ಕಾಲ ಬರುತ್ತದೆ, ರಂಗನಾಥನ ಆಶೀರ್ವಾದದಿಂದ ಇನ್ನೂ ನಾಲ್ಕಾರು ವರ್ಷ ರಾಜಕೀಯ ಮಾಡುತ್ತೇನೆ, ಹಾಸನ ನನ್ನ ಜಿಲ್ಲೆ, ನನ್ನ ಹುಟ್ಟೂರು, ಸ್ವಂತ ಕ್ಷೇತ್ರ ಇದನ್ನು ಹೇಗೆ ಮರೆಯಲಿ ? ಸದ್ಯಕ್ಕೆ ತಾತ್ಕಾಲಿಕವಾಗಿ ನಾನು ಜಿಲ್ಲಾ ಪ್ರವಾಸ ಮಾಡಲ್ಲ, ಕೆಲವು ದಿನಗಳ ನಂತರ ನಿಮಗೆ ತಿಳಿಸಿ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು.

ಈ ವೇಳೆ ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್ , ಮುಖಂಡರಾದ ಅರಸೀಕೆರೆ ಸಂತೋಷ್ , ಜೆಡಿಎಸ್ ವಕ್ತಾರ ಹೊಂಗೆರೆ ರಘು ಸೇರಿದಂತೆ ಇತರರು ಹಾಜರಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!