August 24, 2026
Monday, August 24, 2026
spot_img

ದಿನಭವಿಷ್ಯ: ಈ ರಾಶಿಯವರಿಗೆ ಇಂದು ನಿರಾಳ ಮನಸ್ಸು, ಯಾವ ಸಮಸ್ಯೆಯೂ ಬಾಧಿಸದು

ಮೇಷ
ನಿರಾಳ ಮನಸ್ಸು. ಸಮಸ್ಯೆ ಬಾಧಿಸದು. ಆಪ್ತರ ಜತೆ ಮಧುರ ಬಾಂಧವ್ಯ. ಹಣದ ವಿಚಾರದಲ್ಲಿ  ತೃಪ್ತಿಕರ ಬೆಳವಣಿಗೆ. ಧನಪ್ರಾಪ್ತಿ.  
ವೃಷಭ
ವಿವೇಚನೆಯಿಂದ ವರ್ತಿಸಿ. ಇಲ್ಲದಿದ್ದ್ದಲ್ಲಿ ಹಿನ್ನಡೆ, ಮುಜುಗರ ಅನುಭವಿಸುವಿರಿ. ಆರೋಗ್ಯದತ್ತಲೂ ಹೆಚ್ಚು ಗಮನ ಕೊಡಿ.    
ಮಿಥುನ
 ಕೆಲವು ವಿಷಯವನ್ನು ಅತಿಯಾಗಿ ಹಚ್ಚಿಕೊಳ್ಳದಿರಿ. ನಿರಾಳವಾಗಿರಿ. ಸಮಸ್ಯೆಗೆ ಪರಿಹಾರ ಇದ್ದೇ ಇದೆ. ಕಣ್ಣಿನ ಅಥವಾ ಚರ್ಮದ ಅಲರ್ಜಿ ಸಂಭವ.
ಕಟಕ
 ಬಿಕ್ಕಟ್ಟೊಂದು ಪರಿಹಾರ ಕಾಣಲಿದೆ.  ಕಪಟಿಯೊಬ್ಬರ ಬಣ್ಣ ಬಯಲಾಗುವುದು. ಅವರಿಂದ ದೂರವಿರಿ. ಆರ್ಥಿಕ ಒತ್ತಡ ಹೆಚ್ಚು.    
ಸಿಂಹ
ಮುಖ್ಯ ಕಾರ್ಯ ಸಾಧಿಸಲು ಬಹಳ ಶ್ರಮ ಪಡುವಿರಿ. ಆದರೂ ನಿರೀಕ್ಷಿತ -ಲ ದೊರಕದು. ನಿರಾಶೆ ಬೇಡ, ಒಳ್ಳೆ ಕಾಲ ಬರಲಿದೆ, ಕಾಯುತಿರಿ.  
ಕನ್ಯಾ
ಮುಖ್ಯ ಕೆಲಸ ಬಾಕಿ ಉಳಿಸಬೇಡಿ. ಬೇಗ ಮಾಡಿ ಮುಗಿಸಿ. ಬಂಧುಗಳ ಜತೆ ಜಗಳವಾದೀತು. ಸಹನೆ ಮುಖ್ಯ. ದೈಹಿಕ ನೋವಿದ್ದವರಿಗೆ ನಿರಾಳತೆ.
ತುಲಾ
ವ್ಯವಹಾರದಲ್ಲಿ ಉನ್ನತಿ. ಕೆಲವು ಕೆಲಸ ಸಾಧ್ಯವಾಗಲು ಸಮಯ ಬೇಕಾದೀತು. ದುಡುಕದಿರಿ.ತಾಳ್ಮೆ ವಹಿಸುವುದು ಅವಶ್ಯ.      
ವೃಶ್ಚಿಕ
ನಿಮ್ಮ ಶ್ರಮದಿಂದ ವೃತ್ತಿ ಮತ್ತು ಖಾಸಗಿ ಬದುಕಲ್ಲಿ ಯಶ.ಸಂಬಂಧದಲ್ಲಿ ಏರುಪೇರು ಉಂಟಾದೀತು. ಸಹನೆ ಕಳಕೊಳ್ಳದಿರಿ.          
ಧನು
ಕೌಟುಂಬಿಕ ಮನಸ್ತಾಪವಿದ್ದರೆ ಅದನ್ನು ಬಗೆಹರಿಸಲು ಆದ್ಯತೆ ಕೊಡಿ. ನಿಮ್ಮ ನಡೆನುಡಿ ಬದಲಿಸಿಕೊಳ್ಳಿ. ಹೊಂದಾಣಿಕೆ ಮುಖ್ಯ.      
ಮಕರ
ಮಾನಸಿಕ ಒತ್ತಡ ಹೆಚ್ಚಿಸುವ ಪ್ರಸಂಗ ಉಂಟಾಗಲಿದೆ. ಸೂಕ್ತವಾಗಿ ನಿಭಾಯಿಸಿ. ಇತರರಿಗೆ ನೋವು ತರಬೇಡಿ.  ಜಗಳಕ್ಕೆ ಇಳಿಯಬೇಡಿ.        
ಕುಂಭ
ಸಮಸ್ಯೆಯೊಂದಕ್ಕೆ ಪರಿಹಾರ ಸಿಗದ ಹತಾಶೆ. ಚಿಂತಿಸದಿರಿ,  ಪರಿಹಾರ ತೀರಾ ಸನಿಹದಲ್ಲಿದೆ. ಸುಮ್ಮನೆ ಕೂರುವ ಬದಲು ಪ್ರಯತ್ನ ಪಡಿ.                
 ಮೀನ
ನೀವು ತಾಳುವ ಮಹತ್ವದ ನಿರ್ಧಾರ ಸಂಬಂಧವನ್ನು ಗಟ್ಟಿಗೊಳಿಸಲಿದೆ. ಎಲ್ಲೆಡೆಯಿಂದ ಸಹಕಾರ. ಆರ್ಥಿಕ ಉನ್ನತಿ. 

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !