ಮೇಷ
ವೃತ್ತಿ ಒತ್ತಡದಲ್ಲಿ ಕೆಲವು ಪ್ರಮುಖ ವಿಚಾರ ಕಡೆಗಣಿಸಿದ್ದೀರಿ. ಅದರತ್ತ ಗಮನ ಕೊಡಿ. ಸಾಂಸಾರಿಕ ಸಮಾಧಾನ. ಹೂಡಿಕೆಯಿಂದ ಧನಲಾಭ
ವೃಷಭ
ಜಡತ್ವ ಕಾಡಲಿದೆ. ಕೆಲಸ ನಿಧಾನ. ತುರ್ತು ಕಾರ್ಯ ಕಡೆಗಣಿಸಬೇಡಿ. ಶೇರು ಹೂಡಿಕೆಯಲ್ಲಿ ಎಚ್ಚರ ವಹಿಸುವುದೊಳಿತು. ಸ್ನೇಹಭಂಗ ಸಂಭವ.
ಮಿಥುನ
ಉದ್ವಿಗ್ನ ಪರಿಸ್ಥಿತಿ ಎದುರಿಸುವಿರಿ. ಕೆಲವು ಅನಿರೀಕ್ಷಿತ ಬೆಳವಣಿಗೆ ಅದಕ್ಕೆ ಕಾರಣ. ಮನಸು ಶಾಂತಗೊಳಿಸಲು ಹೆಚ್ಚು ಗಮನ ಕೊಡಿ.
ಕಟಕ
ಸಣ್ಣ ತಪ್ಪು ದೊಡ್ಡ ಪರಿಣಾಮ ಉಂಟು ಮಾಡಬಹುದು. ಹೆಚ್ಚು ಎಚ್ಚರ ಅವಶ್ಯ. ಖರೀದಿ ಹುಮ್ಮಸ್ಸಿನಲ್ಲಿ ಖರ್ಚು ಅಽಕ. ಬಂಧು ಭೇಟಿ.
ಸಿಂಹ
ಎಲ್ಲವೂ ನಿಮಗೆ ಪೂರಕವಾಗಿದ್ದರೂ ಏನೋ ಕೊರಗು. ಪ್ರೀತಿಯಲ್ಲಿ ಹಿನ್ನಡೆ. ಪ್ರಮುಖ ವಿಷಯದಲ್ಲಿ ನಿಮ್ಮ ನಿಲುವು ಬದಲಾದೀತು.
ಕನ್ಯಾ
ಭವಿಷ್ಯದ ಯೋಜನೆ ರೂಪಿಸಲು ಸಕಾಲ. ಉದ್ಯೋಗ ಪಡೆಯುವಲ್ಲಿ ಸಫಲ. ಧೂಳು ಸಂಬಂಧ ಅಲರ್ಜಿ ಉಂಟಾದೀತು. ಕೌಟುಂಬಿಕ ಸೌಹಾರ್ದ.
ತುಲಾ
ಕನಸು ಸಾಕಾರ ಗೊಳಿಸುವ ಸಮಯ ಸಮೀಪಿಸಿದೆ. ಆತ್ಮೀಯರ ಸಾಧನೆಯ ತೃಪ್ತಿ. ವಾಹನ ಚಾಲನೆಯಲ್ಲಿ ತುಸು ಎಚ್ಚರವಿರಲಿ.
ವೃಶ್ಚಿಕ
ಏಕತಾನತೆಯಿಂದ ಹೊರಬಂದು ಬದುಕಿನಲ್ಲಿ ಹೊಸತನ ಅಳವಡಿಸಿಕೊಳ್ಳಿ. ಅನವಶ್ಯ ಜಗಳಕ್ಕೆ ಹೋಗದಿರಿ. ತಾಳ್ಮೆ ಪ್ರದರ್ಶಿಸಿ. ಧನವ್ಯಯ.
ಧನು
ಕಡೆಗಣಿಸಿದ್ದ ವಿಷಯವೊಂದು ಮುನ್ನೆಲೆಗೆ ಬರಲಿದೆ. ಆ ಬಗ್ಗೆ ಗಮನ ಹರಿಸಿ. ವೃತ್ತಿಗೆ ಸಂಬಂಧಿಸಿ ಶುಭ ಸುದ್ದಿ. ಧನಪ್ರಾಪ್ತಿ ಅವಕಾಶ.
ಮಕರ
ಆಪ್ತರ ಜತೆಗಿನ ಭಿನ್ನಮತ ಶಮನ. ಹಣದ ವ್ಯವಹಾರದಲ್ಲಿ ಅನಿರೀಕ್ಷಿತ ತೊಡಕು ಉಂಟಾಗಲಿದೆ. ಮನೆಯ ಸಮಸ್ಯೆಯೊಂದು ನೆಮ್ಮದಿ ಕಲಕುವುದು.
ಕುಂಭ
ನೀವು ನಿರರ್ಥಕ ಅಂದುಕೊಂಡ ಕೆಲಸ ಉತ್ತಮ -ಲಿತಾಂಶ ನೀಡಲಿದೆ. ತೃಪ್ತಿಕರ ಆರ್ಥಿಕ ಬೆಳವಣಿಗೆ. ಕೌಟುಂಬಿಕ ಸಾಮರಸ್ಯ.
ಮೀನ
ವಿವಾಹ ಸಂಬಂಧ ಕೂಡಿಬಂದೀತು. ಉದ್ವಿಗ್ನತೆ ಸೃಷ್ಟಿಸುವ ವಿಷಯಗಳಿಂದ ದೂರವಿರಿ. ವೃತ್ತಿ ಕಾರ್ಯದಲ್ಲಿ ಸಫಲತೆ. ಬಂಧುಗಳ ಸಹಕಾರ.



