ಅರವಿಂದ ಕೇಜ್ರೀವಾಲ್‌ ಗೆ ಕಪ್ಪು ಬಾವುಟ ಪ್ರದರ್ಶಿಸಿ ಮೋದಿ ಹೆಸರು ಕೂಗಿದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್‌ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಮುಖಭಂಗ ಉಂಟಾಗಿದೆ. ಕೇಜ್ರಿವಾಲ್‌ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶನಿವಾರ ಗುಜರಾತ್‌ನ ನವಸಾರಿ ಜಿಲ್ಲೆಯ ಚಿಖ್ಲಿಯಲ್ಲಿ ರ್ಯಾಲಿಗೆಂದು ಆಗಮಿಸಿದ ವೇಳೆ ಜನರು ಅವರಿಗೆ ಕಪ್ಪುಬಾವುಟ ಪ್ರದರ್ಶಿಸಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ಬೆಂಗಾವಲು ಪಡೆ ಹಾದು ಹೋಗುತ್ತಿದ್ದಂತೆ ಚಿಖ್ಲಿ ತಾಲೂಕಿನ ಖುದ್ವೇಲ್ ಮತ್ತು ಗೋಲ್ವಾಡ್ ಗ್ರಾಮಗಳ ನಡುವಿನ ರಸ್ತೆಬದಿಯಲ್ಲಿ ನಿಂತಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಂಬಲಿಗರು ಸೇರಿದಂತೆ ಹಲವಾರು ಜನರು ಕಪ್ಪು ಬಾವುಟವನ್ನು ಬೀಸಿದ್ದಾರೆ. ಅಲ್ಲದೇ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ತೆರಳುತ್ತಿದ್ದ ವೇಳೆ ʼಮೋದಿ ಮೋದಿʼ ಎಂದು ಕೂಗಿದ್ದಾರೆ.

ನಂತರ ಮಾತನಾಡಿದ ಆವರು ಘಟನೆಯನ್ನು ಉಲ್ಲೇಖಿಸಿದರು ಮತ್ತು ತನಗೆ ಕಪ್ಪು ಬಾವುಟವನ್ನು ತೋರಿಸುವವರನ್ನು ತನ್ನ ಸಹೋದರರಂತೆ ಪರಿಗಣಿಸುವುದಾಗಿ ಹೇಳಿದ್ದಾರೆ ಮತ್ತು ಮುಂದೊಂದು ದಿನ ನಾನು ಅವರ ಹೃದಯವನ್ನು ಗೆದ್ದು ಅವರನ್ನು ತನ್ನ ಪಕ್ಷಕ್ಕೆ ಸೇರಿಸುತ್ತೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!