Friday, December 8, 2023

Latest Posts

SHOCKING VIDEO| ಜೈಂಟ್ ವ್ಹೀಲ್‌ನಲ್ಲಿ ತಗಲಾಕ್ಕೊಂಡ 50 ಮಂದಿ, ಮುಂದೇನಾಯ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜೈಂಟ್ ವ್ಹೀಲ್‌ನಲ್ಲಿ 50ಜನರು ತಗಲಾಕ್ಕೊಂಡು ಪರದಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ನಗರದ ನರೇಲಾ ಪ್ರದೇಶದಲ್ಲಿ ನವರಾತ್ರಿ ಆಚರಣೆಯ ಅಂಗವಾಗಿ ಆಯೋಜಿಸಲಾದ ಮೇಳವು ಜೈಂಟ್ ವೀಲ್‌ನಂತಹ ಹಲವಾರು ಮನರಂಜನಾ ಆಟಗಳನ್ನು ಒಳಗೊಂಡಿತ್ತು. ಇದರ ಭಾಗವಾಗಿ ಜೈಂಟ್ ವ್ಹೀಲ್‌ನಲ್ಲಿ ಮೋಜು ಮಸ್ತಿ ಮಾಡಲು ಕುಳಿತಿದ್ದ ಜನರಿಗೆ ಒಮ್ಮೆಲೇ ಮೇಲಿಂದ ಕೆಳಕ್ಕೆ ಬಿದ್ದ ಅನುಭವವಾಗಿದೆ.

ಮೇಲಕ್ಕೆ ಹೋದ ವ್ಹೀಲ್‌ ತಾಂತ್ರಿಕ ಸಮಸ್ಯೆ ಉಂಟಾಗಿ ದಿಢೀರ್ ಶಬ್ಧದೊಂದಿಗೆ ಸ್ಥಗಿತಗೊಂಡಿದ್ದು, ಅದರೊಳಗಿದ್ದವರೆಲ್ಲಾ ಗಾಬರಿಯಿಂದ ಚೀರಾಡತೊಡಗಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಜೈಂಟ್‌ ವ್ಹೀಲ್‌ನಲ್ಲಿಯೇ ಸಿಲುಕಿದ್ದವರನ್ನು ಕೊನೆಗೂ ಪೊಲೀಸರು ರಕ್ಷಿಸಿದ್ದಾರೆ.

ಮಾಹಿತಿ ಪಡೆದ ದೆಹಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಎಲ್ಲರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಸಂದರ್ಶಕರ ಸುರಕ್ಷತೆಯನ್ನು ನಿರ್ಲಕ್ಷಿಸಿದ ಮೇಳದ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!