ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಪ್ರಿಯ ಆ್ಯಪಲ್ ಕಂಪನಿ ಪರಿಚಯಿಸಿರುವ ಐಫೋನ್ 16 ಸರಣಿ ಮಾರಾಟ ಪ್ರಾರಂಭವಾಗಿದೆ. ಇಂದಿನಿಂದ ಖರೀದಿಸಲು ಲಭ್ಯವಿದೆ. ಹೀಗಿರುವಾಗ ನೂತನ ಐಫೋನ್ ಖರೀದಿಸಲು ಜನರು ಕ್ಯೂನಿಂತ ಘಟನೆಯೊಂದು ದೃಶ್ಯ ಸಮೇತ ಬೆಳಕಿಗೆ ಬಂದಿದೆ.
ಮುಂಬೈನ ಬಿಕೆಸಿಯಲ್ಲಿರುವ ಮಳಿಗೆಯಲ್ಲಿ ಐಫೋನ್ 16 ಸರಣಿ ಖರೀದಿಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ, ದೆಹಲಿಯಲ್ಲಿಯೂ ಜನ ಬೆಳಗ್ಗೆ ಅಂಗಡಿ ತೆಗೆಯುವುದಕ್ಕೂ ಮುನ್ನವೇ ಕ್ಯೂ ನಿಂತಿದ್ದಾರೆ.
ಆ್ಯಪಲ್ ಸ್ಟೋರ್ ತೆರೆಯುವ ಮುನ್ನವೇ ಅಂಗಡಿ ಮುಂದೆ ಜನರು ಸೇರಿದ್ದಾರೆ. ಕ್ಯೂ ನಿಂತು ಐಫೋನ್ 16 ಸರಣಿ ಖರೀದಿಸಲು ಮುಂದಾಗಿದ್ದಾರೆ. ಕಳೆದ ವರ್ಷ ಐಫೋನ್ 15 ಮಾರಾಟದ ಸಮಯದಲ್ಲೂ ಇಂತಹದ್ದೇ ದೃಶ್ಯ ಕಂಡುಬಂದಿದೆ.
ದೆಹಲಿ ಸಾಕೇತ್ನಲ್ಲಿರುವ ಆ್ಯಪಲ್ ಸ್ಟೋರ್ ಹೊರಗಡೆಯು ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ. ಸದ್ಯ ನೂತನ ಐಫೋನ್ ಖರೀದಿಸಲು ಇಷ್ಟೊಂದು ಜನರು ಕುತೂಹಲಭರಿತರಾಗಿದ್ದಾರೆ ಎಂಬುದು ಅಚ್ಚರಿಗೆ ದೂಡಿದೆ.