ಹೊಸದಿಗಂತ ವರದಿ,ಬಳ್ಳಾರಿ:
ಸಿ.ಎಂ.ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಜನರು ಬದುಕಿನ ಗ್ಯಾರಂಟಿ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಸಂಗನಕಲ್ ರಸ್ತೆಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಲ್ಲಿವರೆಗೆ ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ, ಕನ್ನಡಿಗರು ನಿತ್ಯ ಭಯದಲ್ಲೇ ಜೀವನ ಕಳೆಯುವಂತಾಗಿದೆ, ಇತ್ತೀಚೆಗೆ ನಡೆದ ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣದಿಂದ ರಾಜ್ಯದ ಜನರು ಬೆಚ್ಚಿ ಬಿದ್ದಿದ್ದಿದ್ದಾರೆ, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು. ತುಷ್ಟೀಕರಣದ ಅತಿರೇಕ ಇದಕ್ಕೆಲ್ಲ ನೇರ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಾತಾಂಧಶಕ್ತಿಯ ಅಟ್ಟಹಾಸ ಅತಿರೇಕಕ್ಕೆರಿದೆ. ಇಷ್ಟೆಲ್ಲ ನಡೆದರೂ ಕಾಂಗ್ರೆಸ್ ನಾಯಕರು ಸೌಜನ್ಯಕ್ಕಾದರೂ ಒಂದು ಖoಡನೆಯ ಮಾತುಗಳನ್ನಾಡಿಲ್ಲ. ಆದರೆ, ಬಿಜೆಪಿ ನಾಯಕರು ಪಕ್ಷ ಬೇಧ ಮರೆತು ಸoತ್ವಾನ ಹೇಳಲು ತೆರಳಿದ್ದಾರೆ. ಕಾಂಗ್ರೆಸ್ ಪಕ್ಷದ ಚುನಾಯಿತ ಜನಪ್ರತಿನಿಧಿಯ ಪುತ್ರಿಗೆ ಬದುಕಿನ ಗ್ಯಾರಂಟಿಯೇ ಇಲ್ಲ, ರಾಜ್ಯದ ಜನರಿಗೆ ಗ್ಯಾರಂಟಿ ಎಲ್ಲಿದೆ ಎಂದು ಪ್ರಶ್ನಿಸಿದರು.
ಬರ್ಬರವಾಗಿ ಹತ್ಯೆಯಾದ ನೇಹಾ ಹಿರೇಮಠ್ ಯುವತಿ ಬಗ್ಗೆ ಹಗುರುವಾಗಿ ಮಾತನಾಡುವ ಕಾಂಗ್ರೆಸ್, ಫಯಾಜ್ ನಿವಾಸಕ್ಕೆ ಹೆಚ್ಚಿನ ಪೋಲೀಸ್ ಭದ್ರತೆ ಕಲ್ಪಿಸಿದೆ. ಭಾಗ್ಯಲಕ್ಷ್ಮೀ ಯೋಜನೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಸರ್ಕಾರಕ್ಕೆ ಲಕ್ಷ್ಮೀಯರ ಪ್ರಾಣಕ್ಕೆ ಕುತ್ತು ತಂದಿದೆ. ಕಾಂಗ್ರೆಸ್ ಕೊಡುವುದು ಅಲ್ಪಸಂಖ್ಯಾತರಿಗೆ ತುಷ್ಟೀಕರಣದ ಗ್ಯಾರಂಟಿ, ಹಿಂದೂಗಳಿಗೆ ಸಾವಿನ ಗ್ಯಾರಂಟಿ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್, ಉಪಾಧ್ಯಕ್ಷ ಗಾಳಿ ಶಂಕ್ರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಸೋಮನಗೌಡ, ಉಡೆದ ಸುರೇಶ್, ನಗರ ಪ್ರಧಾನ ಕಾರ್ಯದರ್ಶಿ ರಾಮಾಂಜಿ, ಜಿಲ್ಲಾ ಮಾದ್ಯಮ ವಿಭಾಗದ ಸಂಚಾಲಕ ರಾಜೀವ್ ತೋಗರಿ, ಸೋಶಿಯಲ್ ಮೀಡಿಯಾ ರಾಜ್ಯ ಸಮಿತಿ ಸದಸ್ಯ ಅಂಜಿ ಕಮ್ಮರಚೇಡು ಸೇರಿ ಪ್ರಮುಖ ಉಪಸ್ಥಿತರಿದ್ದರು.