ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಪೂನಮ್ ಪಾಂಡೆ ಮೃತಪಟ್ಟಿರುವುದಾಗಿ ಅವರ ಮ್ಯಾನೇಜರ್ ಘೋಷಣೆ ಮಾಡಿದ ವಿಷಯ ಸುಳ್ಳು ಎಂದು ಈಗ ಗೊತ್ತಾಗಿದೆ.
ಪೂನಮ್ ಪಾಂಡೆ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಪಬ್ಲಿಸಿಟಿ ಸ್ಟಂಟ್ ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಗರಂ ಆಗಿದ್ದಾರೆ.
ಯಾವುದೇ ನೆಚ್ಚಿನ ನಟ ಅಥವಾ ನಟಿ ನಿಧನರಾಗೋದು ಅಂದ್ರೆ ಅಭಿಮಾನಿಗಳಿಗೆ ನೋವಿನ ಸಂಗತಿ. ಇನ್ನು ಸೆಲೆಬ್ರಿಟಿಗಳ ಜೊತೆ ಒಡನಾಟ ಇಟ್ಟುಕೊಂಡಿರುವ ಸ್ನೇಹಿತರಿಗೂ ಈ ಸುದ್ದಿ ಶಾಕ್ ಆಗಿತ್ತು. ಆದ್ರೆ ಇದು ಚೀಪ್ ಪಬ್ಲಿಸಿಟಿ ಎಂದು ಗೊತ್ತಾಗುತ್ತಿದ್ದಂತೆಯೇ ಜನ ಪೂನಮ್ ಪಾಂಡೆಯನ್ನು ಬಾಯ್ತುಂಬ ಬೈಯುತ್ತಿದ್ದಾರೆ.
ಪಬ್ಲಿಸಿಟಿ ಮಾಡೋ ಲೆವೆಲ್ ಅತಿಯಾಗೋಯ್ತು, ನಿಜವಾಗ್ಯೂ ಮೃತಪಟ್ಟರೂ ಯಾರೂ ನಂಬೋದಿಲ್ಲ. ವಿಷಯ ಸೀರಿಯಸ್ ಇರಬಹುದು ಆದರೆ ಪಬ್ಲಿಸಿಟಿ ಮಾಡಿದ ರೀತಿ ಕೆಟ್ಟದಾಗಿದೆ. ಈ ರೀತಿ ಮಾಡಿದ್ದು ನಿಜಕ್ಕೂ ಕ್ಯಾನ್ಸರ್‌ನಿಂದ ಫೈಟ್ ಮಾಡ್ತಿರೋ ಎಷ್ಟೋ ಜನರನ್ನು ತಮಾಷೆ ಅನ್ನೋ ರೀತಿ ಮಾಡಿದೆ ಎಂದು ನೆಟ್ಟಿಗರು ಹೇಳಿದ್ದಾರೆ.