ನಮ್ಮ ಮಕ್ಕಳಿಂದ ಮೊಬೈಲ್ ಕಿತ್ತುಕೊಳ್ಳೋಕೆ ಆಗ್ತಾ ಇಲ್ಲ, ಅವರು ಮೊಬೈಲ್‌ಗೆ ಅಡಿಕ್ಟ್ ಆಗಿದ್ದಾರೆ ಅನ್ನೋ ಭಯ ಇದೆಯಾ? ಎಷ್ಟೋ ಮಕ್ಕಳು ಮೊಬೈಲ್ ಕೊಡದ್ದಕ್ಕೆ ಕೊಲೆ ಮಾಡೋದು, ಮನೆ ಬಿಟ್ಟು ಹೋಗೋದು, ಸೂಸೈಡ್ ಮಾಡ್ಕೊಳೋ ಸುದ್ದಿ ಕೇಳಿದ್ದೀರಿ. ನಿಮ್ಮ ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡೋಕೆ ಹೀಗೆ ಮಾಡಿ..
ಒಂದು ಟ್ರಿಪ್ ಪ್ಲ್ಯಾನ್ ಮಾಡಿ, ಇಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್, ಟ್ಯಾಬ್ಲೆಟ್‌ಗಳಿಗೆ ಯಾವುದೇ ಜಾಗ ಕೊಡಬೇಡಿ. ಮೊದಲು ಮಕ್ಕಳ ಮೆದುಳಿಗೆ ಮೊಬೈಲ್ ಇಲ್ಲದೆಯೂ ಇರಬಹುದು ಎನ್ನೋದನ್ನು ಖಾತ್ರಿ ಪಡಿಸಿ
ಎರಡನೇಯದ್ದು ಮನೆಯಲ್ಲಿ ಮೊಬೈಲ್ ಹಾಗೂ ಟಿವಿ ಬಂದ್ ಮಾಡಿ, ನಿಮ್ಮ ಎಂಟರ್‌ಟೈನ್‌ಮೆಂಟ್‌ಗಾಗಿ ಮೊಬೈಲ್ ಮುಟ್ಬೇಡಿ. ಕೆಲಸಗಳಿದ್ರೆ ಫೋನ್‌ನಲ್ಲಿ ಮಾತಾಡಿ ಎತ್ತಿಟ್ಟುಬಿಡಿ. ಮೊಬೈಲ್ ತುಂಬಾ ಮುಖ್ಯ ಅಲ್ಲ ಅನ್ನೋದನ್ನು ತಿಳಿಸಿ.
ಮೂರನೆಯದ್ದು ಸ್ಕ್ರೀನ್ ಟೈಮ್ ಲಿಮಿಟ್ ಮಾಡಿ, ಸ್ಟ್ರಿಕ್ಟ್ ಆಗಿರಿ, ಮೊಬೈಲ್ ನೋಡೋಕೆ ಅರ್ಧ ಗಂಟೆ ಅಂದ್ರೆ ಅರ್ಧ ಗಂಟೆ ಅಷ್ಟೇ, ಐದು ನಿಮಿಷವೂ ಹೆಚ್ಚು ಬೇಡ. ಇದು ಒಂದು ರೊಟೀನ್ ಸೆಟ್ ರೊಟೀನ್ ಮಾಡುತ್ತದೆ.
👍🤣