ಜನಪರ ಕೆಲಸವೇ ಧ್ಯೇಯ, ಸೇವಾ ಕಾರ್ಯಕ್ಕೆ ಸದಾ ಮುಂದು: ಆನಂದ ಜಿಗಜಿನ್ನಿ

ಹೊಸದಿಗಂತ ವರದಿ ಬಾಗಲಕೋಟೆ :

ಒಂದು ವರ್ಷದ ನನ್ನ ಅವಧಿಯಲ್ಲಿ ಸೇವಾ ಕಾರ್ಯವನ್ನು ಮಾಡಲು ಲಾಯನ್ಸ್ ಪದಾಧಿಕಾರಿಗಳು, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಲಾಗುವುದು ಎಂದು ನೂತನ ಲಾಯನ್ಸ್ ಕ್ಲಬ್ ಅಧ್ಯಕ್ಷ ಆನಂದ ಜಿಗಜಿನ್ನಿ ತಿಳೊಸಿದರು.

ನವನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವರ್ಷದಲ್ಲಿ ಪ್ರತಿ ತಿಂಗಳ ಒಂದು ಜನರಿಗೆ ಉಪಯುಕ್ತವಾಗುವಂತಹ ಸೇವಾ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.
ಸ್ತನ್ಯಪಾನ ಕುರಿತು ತಪಾಸಣೆ ಚಿಕಿತ್ಸೆ ನೀಡುವ ಕುರಿತು,ವೈದ್ಯರ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ನಿಮಿತ್ತ ಹಿರಿಯ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವುದು, ಉತ್ತಮ ಯುವ ಶಿಕ್ಷಕರನ್ನು ಗುರುತಿಸಿ ಅವರಿಂದ ತರಬೇತಿ ನೀಡಲಾಗುವುಸು. ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಲಾಯನ್ಸ್ ಕೈ ಜೋಡಿಸಲಿದೆ ಎಂದರು.

ಇತ್ತೀಚಿಗೆ ಶಿಕ್ಷಣ ಪೂರೈಸಿದ ಯುವಕರು ನಿರುದ್ಯೋಗ ಹೊಂದಬಾರದು, ಸಮಯ ವ್ಯರ್ಥ ಮಾಡಬಾರದು ಎಂದು ಯುವಕರಿಗೆ ಉದ್ಯೋಗಗಳನ್ನು ಪಡೆದುಕೊಳ್ಳಲು ಸೂಕ್ತ ತರಬೇತಿ ಕೊಡುವ ಕೆಲಸ ಮಾಡಲಾಗುವುದು.ಚೈಲ್ಡ್ ವುಡ್ ಕ್ಯಾನ್ಸರ್ ಕುರಿತು ಚಿಕಿತ್ಸೆ ಹಾಗೂ ತಪಾಸಣಾ ಶಿಬಿರ ಮಾಡುವುದು ಸೇರಿದಂತೆ ಜನರಿಗೆ ಉಪಯುಕ್ತವಾಗುವ ಕಾರ್ಯಕ್ರಮ ಮಾಡಲಾಗುವುದು , ವಿಶ್ವಶಾಂತಿಗಾಗಿ ನಗರಾಧ್ಯಂತ ಗಾಂಧೀಜಿ ಜಯಂತಿ ಮಾಡಲಾಗುವುದು.ಮಹಿಳೆಯರಿಗಾಗಿ ಉದ್ಯೋಗ ಮೇಳ, ಪ್ರವಾಸೋದ್ಯಮ ಅಭಿವೃದ್ಧಿ ಗೆ ಅಧ್ಯತೆ ನೀಡಲಾಗುವುಸು ಎಂದರು.

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂ.25 ರಂದು ಸಂಜೆ 6 ಗಂಟೆಗೆ ವಿದ್ಯಾಗಿರಿಯ ಬಾಲಾಜಿ ಮಂದಿರದಲ್ಲಿ ಆಯೋಜಿಸಲಾಗಿದೆ.ಉದ್ಘಾಟಕರಾಗಿ ಹಾಗೂ ಸೇವಾದೀಕ್ಷೆ ಬೋಧನೆಯನ್ನು ಲಾಯನ್ ಜಿಲ್ಲಾ ಗವರ್ನರ್ ಸುಗಲಾ ಯಳಮೇಲಿ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ನಟ ಡಾ.ಯಶವಂತ ಸರದೇಶಪಾಂಡೆ ಆಗಮಿಸುವರು ಎಂದರು. ರವಿ ಕುಮಟಗಿ,‌ ಸಂಜೀವ ಪಾಟೀಲ, ಡಾ‌. ಭಾವಿ, ವಿರೇಶ ರೋಣದ, ವಿಶ್ವನಾಥ ಗುಳೇದ ಪತ್ರಿಕಾಗೋಷ್ಠಿ ಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!