ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾರ ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಅತೀ ಖಾರ ಸೇವನೆ ಕಣ್ಣು, ಮೂಗು, ಬಾಯಿಯ ಸುತ್ತಲೂ ನೀರು ಸುರಿಯುತ್ತದೆ. ಇದಕ್ಕೂ ಮೀರಿದ ಮೆಣಸಿನಕಾಯಿಯೊಂದು ವಿಶ್ವದಾಖಲೆ ಬರೆದಿದೆ. ಆ ಮೆಣಸಿನ ಹೆಸರೇ ‘ಪೆಪ್ಪರ್ ಎಕ್ಸ್’. ಖಾರದಲ್ಲಿ ಈ ಮೆಣಸಿನಕಾಯಿಗೆ ಬೇರಾವ ಮೆಣಸೂ ಸಾಟಿಯಿಲ್ಲವಂತೆ…
ಪುಕರ್‌ಬಟ್ ಪೆಪ್ಪರ್ ಕಂಪನಿಯ (ಯುಎಸ್‌ಎ) ಸಂಸ್ಥಾಪಕ ಎಡ್ ಕ್ಯೂರಿ ಇದನ್ನು ಬೆಳೆಸಿದ್ದಾರೆ. ‘ಪೆಪ್ಪರ್ ಎಕ್ಸ್’ ಮೆಣಸು ಖಾರದಲ್ಲಿ ಮಾತ್ರವಲ್ಲದೆ ಆಕಾರದಲ್ಲಿಯೂ ತುಂಬಾ ವೈವಿಧ್ಯಮಯವಾಗಿದೆ. ವಿಚಿತ್ರ ಆಕಾರದ ಈ ಮೆಣಸನ್ನು ‘ವಿಶ್ವದ ಹಾಟೆಸ್ಟ್ ಪೆಪ್ಪರ್’ ಎಂದು ಕರೆಯುವುದಲ್ಲದೆ, ಗಿನ್ನಿಸ್ ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ. ಪ್ರಪಂಚದಾದ್ಯಂತ ಹಲವಾರು ರೀತಿಯ ಮೆಣಸಿನಕಾಯಿಗಳಿದ್ದರೂ ಈ ಪೆಪ್ಪರ್ ಎಕ್ಸ್ ಅವೆಲ್ಲವನ್ನೂ ಹಿಂದಕ್ಕೆ ತಳ್ಳಿ ಹೊಸ ದಾಖಲೆ ಸೃಷ್ಟಿಸಿದೆ.
ಇಲ್ಲಿಯವರೆಗೆ… ಕೆರೊಲಿನಾ ರೀಪರ್ ಚಿಲ್ಲಿ ಖಾರದ ಮೆಣಸಿನಕಾಯಿಯಾಗಿತ್ತು. ಅದನ್ನು ಮೆಟ್ಟಿ ನಿಲ್ಲುವ ಮೂಲಕ ಪೆಪ್ಪರ್ ಎಕ್ಸ್ ಗಿನ್ನಿಸ್ ದಾಖಲೆ ನಿರ್ಮಿಸಿದೆ. ಸ್ಕೋವಿಲ್ಲೆ ಹೀಟ್ ಯೂನಿಟ್ ಹೆಚ್ಚಾದಷ್ಟೂ ಮೆಣಸಿನಕಾಯಿ ಹೆಚ್ಚು ಕಾರವಾಘಿರುತ್ತದೆ. ಅಂತಹದ್ದೇ ಈ ಪೆಪ್ಪರ್ ಎಕ್ಸ್ ಮಿರ್ಚಿ. ಈ ರೀತಿಯ ಮೆಣಸಿನಕಾಯಿಯನ್ನು ಎಡ್ ಕ್ಯೂರಿ ಎಂಬ ವ್ಯಕ್ತಿ ಹತ್ತು ವರ್ಷಗಳ ಪರಿಶ್ರಮದ ನಂತರ ಫಸಲು ಪಡೆದಿದ್ದಾನೆ.
ವ್ಯಕ್ತಿಗೆ ಈ ಮೆಣಸಿನಕಾಯಿ ಮೇಲೆ ಪೇಟೆಂಟ್ ಕೂಡ ಲಭಿಸಿದ್ದು, ಇಡೀ ಕುಟುಂಬ ಈ ಪೆಪ್ಪರ್ ಎಕ್ಸ್ ಮಿರ್ಚಿಗಾಗಿ ಶ್ರಮಿಸಿದೆ. ಹತ್ತು ವರ್ಷಗಳ ಕಾಲ ಅವರ ಶ್ರಮಕ್ಕೆ ಪ್ರತಿಫಲವೇ ಈ ಪೆಪ್ಪರ್ ಎಕ್ಸ್.
Pepper X dethrones Carolina Reaper as world’s hottest chilli pepper 🌶️ https://t.co/2B8gByrAnx
— Guinness World Records (@GWR) October 16, 2023