SHOCKING VIDEO| ಕಾರಿನೊಳಗೆ ಆರು ಅಡಿ ಉದ್ದದ ಹೆಬ್ಬಾವು, ನೋಡಿದವರು ಸುಸ್ತೋ..ಸುಸ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾರಿನೊಳಗಡೆ ಆರು ಅಡಿ ಉದ್ಧದ ಹೆಬ್ಬಾವು ಸಿಲುಕಿಕೊಂಡ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ. ಚಿತ್ತರಂಜನ್ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಕಾರ್ ಇಂಜಿನ್‌ನಲ್ಲಿ ಆರು ಅಡಿ ಹೆಬ್ಬಾವು ಇರುವುದನ್ನು ಕಂಡು ಬೆಚ್ಚಿಬಿದ್ದರು.

ಕೂಡಲೇ ಸಂಬಂಧಪಟ್ಟ ಎನ್‌ಜಿಒಗೆ ಮಾಹಿತಿ ನೀಡಿದ್ದು, ಆ ಹಾವನ್ನು ಹಿಡಿಯಲು ಸಿಬ್ಬಂದಿಗೆ ಸುಮಾರು 30 ನಿಮಿಷ ಬೇಕಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ವೈಲ್ಡ್ ಲೈಫ್ ಎಸ್‌ಒಎಸ್ ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಹೆಬ್ಬಾವು ಇಂಜಿನ್‌ಗೆ ಸುತ್ತಿಕೊಂಡಿದ್ದು, ಅದನ್ನು ಸುರಕ್ಷಿತವಾಗಿ ಹೊರತೆಗೆಯಲು ಸಾಕಷ್ಟು ಸಮಯ ಹಿಡಿಯಿತು ಎಂದು ಎನ್‌ಜಿಒ ಸಿಬ್ಬಂದಿ ವಿವರಿಸಿದ್ದಾರೆ.

ರಕ್ಷಣೆಯ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ಹಾವನ್ನು ಹಸ್ತಾಂತರಿಸಲಾಗಿದ್ದು, ಕಾಡಿಗೆ ಬಿಡಲಾಯಿತು. ಹಾವುಗಳು ಕಂಡು ಬಂದರೆ ಸಾಯಿಸಬೇಡಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಎನ್‌ಜಿಒ ಸಿಬ್ಬಂದಿ ಸೂಚಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!