ಶೇ. 10ರಷ್ಟು ಉದ್ಯೋಗಿಗಳಿಗೆ ಗೇಟ್ ಪಾಸ್ ಕೊಡಲು ಮುಂದಾದ ಸೇಲ್ಸ್‌ಫೋರ್ಸ್ ಇಂಕ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಈಗಾಗಲೇ ಹಲವು ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ಕಡಿತಗೊಳಿಸುತ್ತಿದ್ದು, ಇದೀಗ ಸೇಲ್ಸ್‌ಫೋರ್ಸ್ ಇಂಕ್ (Salesforce Inc) ಕಂಪನಿಯು ತನ್ನ ಸುಮಾರು ಶೇ. 10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ.

ಗ್ರಾಹಕರು ವ್ಯಾಪಾರ ಸುಧಾರಣೆ ಯೋಜನೆಗಳನ್ನು ಮುಂದೂಡುತ್ತಿರುವುದರಿಂದ ಅದರ ಸಲಹಾ ವ್ಯವಹಾರದಲ್ಲಿನ ನಿಧಾನಗತಿ ಪ್ರರಿಣಾಮ ಬೀರಿದ್ದು, ಜೊತೆಗೆ ಕಂಪನಿಯ ಪರಿಸ್ಥಿತಿಯು ಸವಾಲಿನಿಂದ ಕೂಡಿದೆ.

ಹೀಗಾಗಿ ಕಡಿತದ ಅನಿವಾರ್ಯವನ್ನು ಸಹ-ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಬೆನಿಯೋಫ್ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಕೊರೋನಾ ಬಳಿಕ ಎದುರಾಗುತ್ತಿರುವ ಆರ್ಥಿಕ ಕುಸಿತದ ಸಮಸ್ಯೆ ನಡುವೆ ನಾವು ಹಲವಾರು ಜನರನ್ನು ನಾವು ನೇಮಿಸಿಕೊಂಡಿದ್ದೇವೆ. ಅದರ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಬೆನಿಯೋಫ್ ಹೇಳಿದ್ದಾರೆ.

ಸೇಲ್ಸ್‌ಫೋರ್ಸ್ ಸುಮಾರು $1.4 ಶತಕೋಟಿಯಿಂದ $2.1 ಶತಕೋಟಿ ಶುಲ್ಕವನ್ನು ಭರಿಸುವ ನಿರೀಕ್ಷೆಯಿದೆ. ಇದರಲ್ಲಿ ಸುಮಾರು $800 ಮಿಲಿಯನ್ ನಿಂದ $1 ಬಿಲಿಯನ್ 2023 ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ದಾಖಲಾಗಲಿದೆ ಎನ್ನಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!