ಶಿಕ್ಷಕನ ಕೈಯಲ್ಲಿ ಪರ್ಫೂಮ್ ಬಾಂಬ್: ಜಮ್ಮು ಪೊಲೀಸರಿಂದ ಆರೋಪಿ ಬಂಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೈಷ್ಣೋದೇವಿ ಯತ್ತ ತೆರಳುತ್ತಿದ್ದ ಬಸ್ನಲ್ಲಿ ನಡೆದ ಸ್ಫೋಟ ಸಹಿತ ಹಲವು ಸ್ಫೋಟಗಳಲ್ಲಿ ಭಾಗಿಯಾದ ಆರೋಪದ ಮೇಲೆ ಲಷ್ಕರ್-ಎ-ತೊಯ್ಬಾ-ಭಯೋತ್ಪಾದಕನಾಗಿ ಬದಲಾಗಿರುವ ಸರ್ಕಾರಿ ಶಾಲೆಯ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರು ಗುರುವಾರ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಜಮ್ಮುವಿನ ನರ್ವಾಲ್ನಲ್ಲಿ ನಡೆದ ಅವಳಿ ಸ್ಫೋಟ ಪ್ರಕರಣದ ತನಿಖೆಯ ನಂತರ ರಿಯಾಸಿ ಜಿಲ್ಲೆಯ ನಿವಾಸಿ ಆರೋಪಿ ಆರಿಫ್ನನ್ನು ಬಂಧಿಸಲಾಗಿದೆ.

ಈತನ ಕೈಯಿಂದ ಪರ್ಫೂಮ್ ಬಾಟಲಿಯೊಳಗೆ ಅಳವಡಿಸಲಾದ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ವಶಪಡಿಸಿಕೊಳ್ಳಲಾಗಿದೆ ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆರಿಫ್ ತನ್ನ ಪಾಕಿಸ್ತಾನಿ ಉಗ್ರರ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದ್ದಾನೆ ಮತ್ತು ಕಳೆದ ಮೇನಲ್ಲಿ ವೈಷ್ಣೋದೇವಿ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ತಾನು ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಸಿಂಗ್ ತಿಳಿಸಿದ್ದಾರೆ. ಬಸ್ ಸ್ಫೋಟದಲ್ಲಿ ನಾಲ್ಕು ಮೃತಪಟ್ಟಿದ್ದರು ಮತ್ತು 24 ಜನ ಗಾಯಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!