ಹೊಸದಿಗಂತ ವರದಿ, ಶಿವಮೊಗ್ಗ:
ಮುಂಬರುವ ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಅಲಂಕಾರ ಮಾಡುವವರು ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಡಳಿತ ಸಭಾಭನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಶಾಂತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಸಂದ‘ರ್ಗಳಲ್ಲಿ ಕೆಲವು ಬಾರಿ ಫ್ಲೆಕ್ಸ್ ಮತ್ತು ಬಂಟಿಂಗ್ಸ್ ವಿಚಾರಕ್ಕೆ ಗಲಾಟೆಗಳು ಆಗಿವೆ. ಅದನ್ನು ತಡೆಯುವುದು ನಮ್ಮ ಉದ್ದೇಶ. ಫ್ಲೆಕ್ಸ್ ಮತ್ತು ಬಂಟಿಂಗ್ಸ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲು ಅನುಮತಿ ಪಡೆಯುವುದು ಕಡ್ಡಾಯ ಎಂದರು.
ಅದರ ಜೊತೆಗೆ ಯಾರೂ ಕೂಡ ಡಿಜೆ ಬಳಸಲು ಜಿಲ್ಲಾಡಳಿತ ಅನುಮತಿ ನೀಡುವುದಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ಆದೇಶವೇ ಇದೆ. ಹಾಗಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಡಿಜೆ ಬಳಸಲು ಅನುಮತಿ ಇರುವುದಿಲ್ಲ ಎಂದು ತಿಳಿಸಿದರು.
ಪೆಂಡಾಲ್‌ನಲ್ಲಿ ಸಿಸಿ ಕ್ಯಾಮೆರಾ ಇರಬೇಕು
ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಈ ಬಾರಿ ದೇವರೇ ನಮ್ಮನ್ನು ಪರೀಕ್ಷೆ ಮಾಡುವ ರೀತಿ ಗಣೇಶ ಹಬ್ಬದ ವಿಸರ್ಜನಾ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆಯನ್ನು ಒಂದೇ ದಿನ ಬಂದಿದೆ. ಈ ಪರೀಕ್ಷೆಯಲ್ಲಿ ನಾವೆಲ್ಲರೂ 100 ಕ್ಕೆ 100 ಅಂಕ ಗಳಿಸೋಣ ಎಂದರು.
ಈಗಾಗಲೇ ಅನುಮತಿ ಸಂಬಂಧ ಏಕ ಗವಾಕ್ಷಿ ಯೋಜನೆ ಅಳವಡಿಸಲಾಗಿದೆ. ಸರಳವಾಗಿ ಒಂದೇ ಕಡೆ ಅನುಮತಿ ಪಡೆಯಬಹುದು. ಕೆಲ ನಿರ್ಬಂ‘ಗಳು ಅನಿವಾರ್ಯ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಗಣೇಶ ಪ್ರತಿಷ್ಠಾಪನೆ ಮಾಡುವವರು ಪೆಂಡಾಲ್‌ನಲ್ಲಿ ಸಿಸಿಟಿವಿ ಹಾಕುವುದು ಕಡ್ಡಾಯ ಎಂದರು.
ಶಾಸಕ ಚನ್ನಬಸಪ್ಪ, ಜಿಪಂ ಸಿಇಒ ಸ್ನೇಹಲ್ ಸುಧಾಕರ್, ಎಎಸ್ಪಿ ಅನಿಲ್ ಕುಮಾರ್, ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ವಿವಿಧ ಸಂಘಟನೆ ಪ್ರಮುಖರು ಹಾಜರಿದ್ದರು.