ಚನ್ನಮ್ಮ ಮೈದಾನದಲ್ಲಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಬೇಕು, ತಡರಾತ್ರಿವರೆಗೂ ಪ್ರತಿಭಟನೆ!

ಹೊಸದಿಗಂತ ವರದಿ ಹುಬ್ಬಳ್ಳಿ:

ನಗರದ ಚನ್ನಮ್ಮ ವೃತ್ತದ ಹತ್ತಿರ ವಿರುವ ಮೈದಾನದಲ್ಲಿ ವಿಷಯ ಮತ್ತೆ ಮುನ್ನೆಲೆಗೆ ಬಂದಿದ್ದು, ಚನ್ನಮ್ಮ ಮೈದಾನ ಗಜನನ ಉತ್ಸವ ಮಹಾಮಂಡಳ ಮೈದಾನದಲ್ಲಿ ಮೂರು ದಿನಗಳ ಕಾಲ ಕಾಮಣ್ಣ ರತಿ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಆದರೆ ಪಾಲಿಕೆ ಆಯುಕ್ತರು ಅನುಮತಿ ನೀಡದ ಕಾರಣ ಬುಧವಾರ ತಡರಾತ್ರಿಯ ವರೆಗೂ ಮೈದಾನದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅನುಮತಿ ನೀಡದಿದ್ದರು ಸಹ ಮೈದಾನ ಮಹಾದ್ವಾರದ ಎದುರಿಗೆ ಮೂರ್ತಿ ಪ್ರತಿಷ್ಠಾಪಿಸಿ ಹೋಳಿ ಆಚರಣೆ‌ ಮಾಡಲಾಗುತ್ತಿದೆ ಎಂದು ಎಚ್ಚರಿಕೆ ಸಹ ನೀಡಿದ್ದರು.

ಇದಕ್ಕೆ ಅನುಮತಿ ನೀಡಬೇಕೋ ಅಥವಾ ಬೇಡಾ ಎಂಬ ವಿಷಯದ ಕುರಿತು ನಗರದ ಉಪನಗರ ಪೊಲೀಸ್ ಠಾಣೆಯ ಮೇಲಿರುವ ಕಾಂಪೌಲ್ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಮಹಾನಗರದ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಹು-ಧಾ ಪೊಲೀಸ್ ಆಯುಕ್ತ ರಮಣ ಗುಪ್ತಾ, ಡಿಸಿಪಿ ಗೋಪಾಲ ಬ್ಯಾಕೋಡ್, ಎಸಿಪಿ ಬಲ್ಲಪ್ಪ ನಂದಗಾವಿ ಸಭೆಯಲ್ಲಿ ಭಾಗವಹಿಸಿದ್ದಾರೆ.

ಮೈದಾನ ಬೀಗಿ ಸುತ್ತಮುತ್ತ ಬೀಗಿ ಭದ್ರತೆ: ಮೈದಾನ ಸುತ್ತುಮುತ್ತು ಪೊಲೀಸ್ ಸಂಪೂರ್ಣ ಬೀಗಿ ಬಂದೋಬಸ್ತ ಮಾಡಲಾಗಿದೆ. ಮೈದನಾ ಎರಡು ದ್ವಾರಕ್ಕೆ‌ ಬೀಗ ಹಾಕಲಾಗಿದೆ. ವಾಹನ‌ ಹಾಗೂ ಸಾರ್ವಜನಿಕ ನಿಷೇಧಿಸಲಾಗಿದೆ. ನಗರ ಶಸ್ತ್ರಾಸ್ತ್ರ ಮೀಸಲು ಪಡೆಯ ಎರಡು ತುಕಡಿವಾಹ
ಉಪನಗರ ಪೊಲೀಸ್ ಅಧಿಕಾರಿ ಎಂ.ಎಸ್. ಹೂಗಾರ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಎರಡು ಪೊಲೀಸ್ ತುಕಡಿ ವಾಹನ ಹಾಗೂ ಸಿಬ್ಬಂದಿ‌ ನಿಯೋಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!