ಬೀದರ್ ಜಿಲ್ಲೆಯಲ್ಲಿ ಸಿಪೇಟ್ ಕೇಂದ್ರ ಸ್ಥಾಪನೆಗೆ ಅನುಮತಿ: ಕೇಂದ್ರ ಸಚಿವ ಭಗವಂತ ಖೂಬಾ

ಹೊಸದಿಗಂತ ವರದಿ,ಬೀದರ್:

ಕೇಂದ್ರ ರಾಸಾಯನಿಕ ರಸಗೊಬ್ಬರ ಸಚಿವಾಲಯದಿಂದ ಬೀದರ ಜಿಲ್ಲೆಯಲ್ಲಿ ಸಿಪೇಟ್ ಕೇಂದ್ರ ಪ್ರಾರಂಭಿಸಲು ಮಂಜೂರಾತಿ ಸಿಕ್ಕಿರುತ್ತದೆ, ಇದಕ್ಕೆ ಅವಶ್ಯಕವಿರುವ ಭೂಮಿ ಹಾಗೂ ನಿರ್ಮಾಣ ವೆಚ್ಚದ 50% ಅನುದಾನ ನೀಡುವಂತೆ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿಗೆ ಎಂದು ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾರವರು ತಿಳಿಸಿದ್ದಾರೆ.

ಇಲಾಖೆಯ ಹಿಂದಿನ ಸಚಿವರಾದ ದಿ. ಅನಂತಕುಮಾರಜಿಯವರು ಬೀದರನಲ್ಲಿ ಸಿಪೇಟ್ ಕೇಂದ್ರ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದರು, ಕಾರಣಾಂತರಗಳಿಂದ ಸಿಪೇಟ್ ಕೇಂದ್ರ ಬೀದರನಲ್ಲಿ ಪ್ರಾರಂಭವಾಗಿರಲಿಲ್ಲಾ, ಆದರೆ ನಾನು ಸಚಿವನಾದ ಮೇಲೆ ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಸಿಪೇಟ್ ಕೇಂದ್ರ ಪ್ರಾರಂಭಕ್ಕೆ ಅಗತ್ಯ ಪ್ರಸ್ತಾವನೆಗಳು, ರಾಜ್ಯದಿಂದ ಕೇಂದ್ರಕ್ಕೆ ತರಿಸಿಕೊಂಡು, ಸಿಪೇಟ್ ಕೇಂದ್ರ ಬೀದರ ನಲ್ಲಿ ಪ್ರಾರಂಭಿಸಲು ಮಂಜೂರಾತಿಕೊಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಸಚಿವರಾದ ಭಗವಂತ ಖೂಬಾರವರು, ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಜಿಯವರಿಗೆ ನಿನ್ನೆ ಬೆಂಗಳೂರಿನಲ್ಲಿ ಭೇಟಿ ಮಾಡಿ, ಬೀದರ ಜಿಲ್ಲೆಗೆ ಸಿಪೇಟ್ ಮಂಜೂರಾತಿಯಾಗಿರುವ ಬಗ್ಗೆ ತಿಳಿಸಿ, ಅಗತ್ಯ ಜಮೀನು ಹಾಗೂ ಎಲ್ಲಾ ಸಹಕಾರ ಒದಗಿಸಿಕೊಡುವಂತೆ ಕೋರಿದ್ದಾರೆ.
ಸಚಿವರ ಮನವಿಗೆ ಸ್ಪ್ಪಂದಿಸಿದ ಮುಖ್ಯಮಂತ್ರಿಗಳು, ಅಗತ್ಯ ಜಮೀನು ಹಾಗೂ ಕೇಂದ್ರದ ಷರತ್ತುಗಳಂತೆ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಸಮಸ್ತ ಜನತೆಯ ಪರವಾಗಿ ಸಚಿವರು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಜಿಯವರಿಗೆ ಧನ್ಯವಾದಗಳು ತಿಳಿಸಿದ್ದಾರೆ.
ಸಿಪೇಟ್ ಕೇಂದ್ರ ಪ್ರಾರಂಭಕ್ಕಾಗಿ ರಸಾಯನಿಕ ಹಾಗೂ ರಸಗೊಬ್ಬರ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು, ರಾಜ್ಯದ ವಾಣಿಜ್ಯ ಹಾಗೂ ಉದ್ಯಮ ಇಲಾಖೆಯ ಕಾರ್ಯದರ್ಶಿಗಳಿಗೆ ಅನುಷ್ಠಾನ ಸಂಬಂಧಿತ ವಿಸ್ತ್ರುತವಾದ ಪತ್ರವೊಂದನು ಬರೆದಿದ್ದಾರೆ.
ಸಿಪೇಟ್ ಕೇಂದ್ರ ಪ್ರಾರಂಭಕ್ಕೆ ರಾಜ್ಯದಿಂದ 10 ಎಕ್ಕರೆ ಜಮೀನು ಹಾಗೂ ಅಂದಾಜು ನಿರ್ಮಾಣ ವೆಚ್ಚದಲ್ಲಿ 50% (45 ಕೋಟಿ) ರಾಜ್ಯದಿಂದ ಅನುದಾನ ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈ ಕೇಂದ್ರದಲ್ಲಿ ಸುಮಾರು 8300 ಚದರ ಅಡಿಯಲ್ಲಿ ಕಾಲೇಜು ಕಟ್ಟಡ, ಲ್ಯಾಬೋರೊಟರಿಸ್, ಸಿಬ್ಬಂದಿಗಳ ಗೃಹ, ಹಾಗೂ 3600 ಚದರ ಅಡಿಯಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ವಸತಿ ಗೃಹ ನಿರ್ಮಾಣವಾಗಲಿವೆ ಎಂದು ತಿಳಿಸಿದ್ದಾರೆ.
ಈ ಕೇಂದ್ರದಲ್ಲಿ ಕೌಶಲ್ಯ ತರಬೇತಿ ಹಾಗೂ ಡಿಪ್ಲೋಮಾ ಕೋರ್ಸಗಳಿರಲಿದ್ದು, ಪ್ಲಾಸ್ಟಿಕ್ ಹಾಗೂ ಪಾಲಿಮರ್ ಉದ್ಯಮಕ್ಕೆ ಅವಶ್ಯಕವಿರುವ ತರಬೇತಿ ನೀಡಲಾಗುವುದು. ನಿರುದ್ಯೋಗ ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ, ಸ್ವಯಂ ಉದ್ಯೋಗಕ್ಕೂ ಪ್ರೇರಣೆ ನೀಡುವ ಕೆಲಸ ಮಾಡಲಾಗುವುದು. ಹಾಗೂ ಈ ಕೇಂದ್ರದಿಂದ ಪ್ರತಿವರ್ಷ ಸುಮಾರು 2000 ಯುವಕರಿಗೆ ಉದ್ಯೋಗ ಆಧಾರಿತ ತರಬೇತಿ ನೀಡಲಾಗುತ್ತದೆ.
ಬೀದರ ಜಿಲ್ಲೆಯ ಹಾಗೂ ಕಲ್ಯಾಣ ಕರ್ನಾಟಕದ ಯುವಕರಿಗೆ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಈ ಕೇಂದ್ರವು ಸಹಕಾರಿಯಾಗಲಿದೆ ಹಾಗೂ ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಈ ಕೇಂದ್ರವು ಮಹತ್ತರ ಪಾತ್ರ ವಹಿಸಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಮುಂಬರುವ ಕೆಲವೆ ದಿನಗಳಲ್ಲಿ ಬೀದರನಲ್ಲಿ ಸಿಪೇಟ್ ಕೇಂದ್ರ ಪ್ರಾರಂಭವಾಗಲಿದೆ, ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕೇಂದ್ರದ ಮಂಜೂರಾತಿಗಾಗಿ ಸಹಕರಿಸಿರುವ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿಯವರಿಗೆ, ರಸಾಯನಿಕ ಹಾಗೂ ರಸಗೊಬ್ಬರ ಖಾತೆಯ ಸಂಪುಟ ದರ್ಜೆ ಸಚಿವರಾದ ಮನ್ಸೂಖ್ ಮಾಂಡವೀಯಾರವರಿಗೆ, ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಗೆ ಹಾಗೂ ಕೇಂದ್ರ ಮತ್ತು ರಾಜ್ಯದ ಇಲಾಖೆಯ ಅಧಿಕಾರಿಗಳಿಗೆ ಸಮಸ್ತ ಬೀದರ ಜಿಲ್ಲೆಯ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಕೇಂದ್ರ ಸಚಿವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!