ಮಂಗಳನ ಅಂಗಳದಲ್ಲಿ ‘ಜೀವಿಗಳ ಅಸ್ತಿತ್ವ’ದ ಬಗ್ಗೆ ಅಚ್ಚರಿಯ ಮಾಹಿತಿ ರವಾನಿಸಿದೆ ಪರ್ಸೆವೆರೆನ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಂಗಳ ಗ್ರಹದಲ್ಲಿ ಮೊಕ್ಕಾಂ ಹೂಡಿರುವ ನಾಸಾದ ಪರ್ಸೆವೆರೆನ್ಸ್ ರೋವರ್, ಮಹತ್ವದ ಅಂಶವೊಂದನ್ನು ಕಲೆಹಾಕಿ ಭೂಮಿಗೆ ರವಾನಿಸಿದೆ! ಮಂಗಳನ ಅಂಗಳ ಬರೋಬ್ಬರಿ 3.5 ಶತ ಕೋಟಿ ವರ್ಷಗಳ ಹಿಂದೆ ವಾಸಯೋಗ್ಯವಾಗಿತ್ತು ಎಂಬುದಕ್ಕೆ ಸಾಕ್ಷಿಯನ್ನು ಅದು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

ಇಲ್ಲಿ ಡೆಲ್ಟಾ ನದಿ ಅಸ್ತಿತ್ವದ ಕುರಿತು ಸಂಶೋಧನೆ ನಡೆಸುತ್ತಿರುವ ರೋವರ್, ಬಹಳಷ್ಟು ಕುರುಹುಗಳನ್ನು ಪತ್ತೆಹಚ್ಚಿದ್ದು, ಇಲ್ಲಿನ ಸ್ಥಳ ಸಾವಯವ ಪದಾರ್ಥಗಳಿಂದ ತುಂಬಿತ್ತು ಎಂಬುದಕ್ಕೆ ಸಾಕ್ಷಿ ಸಂಗ್ರಹಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಲೇಯರ್ಡ್ ಸೆಡಿಮೆಂಟರಿ ಬಂಡೆಗಳಿಂದ ಆವೃತ್ತವಾಗಿರುವ ಸ್ಕಿನ್ನರ್ ರಿಡ್ಜ್ ಎಂಬ ಪ್ರದೇಶದಲ್ಲಿ ರೋವರ್ ಬಂಡೆಯ ಅಳತೆ, ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ನೀರಿನಿಂದ ಸಾಗಿಸಲ್ಪಟ್ಟ ವಸ್ತುಗಳನ್ನು ಅದು ಪತ್ತೆಮಾಡಿದೆ. ಇದು 3.5 ಶತಕೋಟಿ ವರ್ಷಗಳ ಹಿಂದೆ ವಾಸಯೋಗ್ಯ ಪರಿಸರವನ್ನು ಹೊಂದಿತ್ತು ಎಂದು ಸೂಚಿಸುತ್ತದೆ‌ ಎಂದು ಅವರು ವಿಶ್ಲೇಷಿಸಿದ್ದಾರೆ.

ಮಂಗಳನಲ್ಲಿ ಜೀವಿಗಳ ಅಸ್ತಿತ್ವವನ್ನು ಹುಡುಕುವ ಉದ್ದೇಶದಲ್ಲಿ 18 ತಿಂಗಳುಗಳ ಹಿಂದೆ ತನ್ನ ‘ಮಾಸ್೯ ಸ್ಯಾಂಪಲ್ ರಿಟನ್ಸ್೯’ ಕಾರ್ಯಾಚರಣೆ ಆರಂಭಿಸಿರುವ ರೋವರ್, ಇದುವರೆಗೆ 12 ರಾಕ್ ಮಾದರಿಗಳನ್ನು ಸಂಗ್ರಹಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!