October 15, 2026
Thursday, October 15, 2026
spot_img

ಪಿಜಿಯಲ್ಲಿ ಹೊತ್ತಿ ಉರೀತಿದ್ದ ಬೆಂಕಿ ನೋಡಿ ಭಯಬಿದ್ದ ಗರ್ಲ್ಸ್‌: ಮಹಡಿಯಿಂದ ಹಾರಿ ಪ್ರಾಣ ಉಳಿಸಿಕೊಂಡ್ರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿರುವ ಪಿಜಿಗೆ ಬೆಂಕಿ ತಗುಲಿದ್ದು, ಅದರಲ್ಲಿದ್ದ ಹುಡುಗಿಯರೆಲ್ಲ ಪಿಜಿಯಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.

ರಾಜ್‌ಕುಮಾರ್‌ ಸ್ಮಾರಕದ ಸಮೀಪ ಇರುವ ಬ್ಯಾನರ್‌ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಗೋದಾಮಿನ ಪಕ್ಕದಲ್ಲಿ ಇದ್ದ ಪಿಜಿಗೆ ಬೆಂಕಿ ತಗುಲಿದ್ದು, ಹುಡುಗಿಯರು ಹೌಹಾರಿದ್ದಾರೆ.

ಪಿಜಿಯಲ್ಲಿದ್ದ ಫೋನ್‌, ಲ್ಯಾಪ್‌ಟಾಪ್‌ ಎಲ್ಲ ವಸ್ತುಗಳನ್ನು ಬಿಟ್ಟ ಹುಡುಗಿಯರು ಕಟ್ಟಡದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಕೆಲವರು ಮೆಟ್ಟಿಲು ಇಳಿದಿದ್ದು, ಹಲವರು ಮಹಡಿಯಿಂದ ಹಾರಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದೆ. ಹುಡುಗಿಯರು ಮೇಲಿಂದ ಹಾರಿದ ವಿಡಿಯೋ ಸಿಸಿಟಿವಿಯಲ್ಲಿ ಕಾಣಸಿಕ್ಕಿದೆ. ಸದ್ಯ 50 ಯುವತಿಯರು ಅಪಾಯದಿಂದ ಪಾರಾಗಿದ್ದಾರೆ.

Must Read