ಹಿಂಗೂ ಪರೀಕ್ಷೆ ಬರೆಯಬಹುದಾ?: ವಿದ್ಯಾರ್ಥಿಗಳ ಫೋಟೋಗಳು ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಫಿಲಿಪ್ಪೀನ್ಸ್ ನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವೇಳೆ ಸಿಬ್ಬಂದಿ ಕಾಪಿ ಹೊಡೆಯದಂತೆ ಮಾಡಿರುವ ಪ್ಲಾನ್‌ ಎಲ್ಲರನ್ನೂ ಆಶ್ಚರ್ಯಕ್ಕೆ ಗುರಿಮಾಡಿದೆ. ವಿದ್ಯಾರ್ಥಿಗಳ ಮುಖ, ತಲೆ ಮೇಲೆ ಹೆಲ್ಮೆಟ್, ಪೇಪರ್, ಎಗ್ ಬಾಕ್ಸ್ ಗಳನ್ನು ಹಾಕಲಾಗಿದ್ದು, ವಿದ್ಯಾರ್ಥಿಗಳು ಆಚೆ ಈಚೆ ನೋಡದೆ, ಕೇವಲ ಅವರ ಉತ್ತರ ಪತ್ರಿಕೆಗಳನ್ನು ನೋಡುವಂತೆ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ.

 

ಲೆಗಾಜ್ಪಿ ನಗರದ ಕಾಲೇಜೊಂದರ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳೆ ಕಾಲೇಜು ಸಿಬ್ಬಂದಿ ನಡೆದುಕೊಂಡ ರೀತಿ ಇದು. ಆ ಕಾಲೇಜಿನ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಪರೀಕ್ಷೆ ಬರೆಯುವಂತೆ ಈ ವ್ಯವಸ್ಥೆ ಮಾಡಿದ್ದಾರೆ ಎಂದಿದ್ದಾರೆ. ಈ ಐಡಿಯಾ ಕೆಲಸ ಮಾಡಿದೆ ಎಂದೂ ಕೆಲವು ಪ್ರಾಧ್ಯಾಪಕರು ಹೇಳಿಕೊಂಡಿದ್ದಾರೆ. ಕಾಲೇಜು ಸಿಬ್ಬಂದಿ ಈ ರೀತಿಯ ಪ್ರಯತ್ನ ಮಾಡುತ್ತಿರುವುದೇಕೆ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ಹಲವು ದೇಶಗಳಲ್ಲಿ ಇದೇ ರೀತಿಯ ಪ್ರಯತ್ನಗಳು ನಡೆದಿದ್ದು, ಕಾಲೇಜು ಸಿಬ್ಬಂದಿ ಟೀಕೆ ಎದುರಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!