April 11, 2026
Saturday, April 11, 2026
spot_img

ಒಂದು ಕೈಯಲ್ಲಿ ಫೋನ್, ಮತ್ತೊಂದು ಕೈಯಲ್ಲಿ ಸ್ಟೇರಿಂಗ್: ರೀಲ್ಸ್ ಮಾಡುವ ಹುಚ್ಚಿಗೆ ಹಾರಿಹೋಯ್ತು ಎರಡು ಪ್ರಾಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಕೈಯಲ್ಲಿ ಫೋನ್, ಮತ್ತೊಂದು ಕೈಯಲ್ಲಿ ಸ್ಟೇರಿಂಗ್: ರೀಲ್ಸ್ ಮಾಡುವ ಹುಚ್ಚಿಗೆ ಹಾರಿಹೋಯ್ತು ಎರಡು ಪ್ರಾಣ

ವೇಗವಾಗಿ ಕಾರು ಚಲಾಯಿಸಿ ರೀಲ್ಸ್ ಮಾಡುತ್ತಿದ್ದ ಇಬ್ಬರು ಯುವಕರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಜೆಟ್‌ಪುರದಲ್ಲಿ ನಡೆದಿದೆ. ಶನಿವಾರ ರಾತ್ರಿ ಸಂಭವಿಸಿದ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮೃತರನ್ನು ಕಾರು ಚಾಲನೆ ಮಾಡುತ್ತಿದ್ದ ಅವಧ್ ತಿವಾರಿ ಹಾಗೂ ಅವರ ಸ್ನೇಹಿತ ದೇವರಾಜ್ ಗೋಸಾಯಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:

ತಿವಾರಿ ತಮ್ಮ ಹುಂಡೈ ವೆರ್ನಾ ಕಾರನ್ನು ಸುಮಾರು 120 ಕಿ.ಮೀ ವೇಗದಲ್ಲಿ ಚಲಾಯಿಸುತ್ತಿರುವ ದೃಶ್ಯಗಳನ್ನು ಮೊದಲು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು.

ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಈ ದೃಶ್ಯವನ್ನು ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ. ವೇಗವಾಗಿ ಸಾಗುತ್ತಿದ್ದ ಕಾರು ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಯಿಂದ ತಿವಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಿವಾರಿ ಜೊತೆಗೆ ಪ್ರಯಾಣಿಸುತ್ತಿದ್ದ 20 ವರ್ಷದ ದೇವರಾಜ್ ಗೋಸಾಯಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪ್ರಯಾಣಿಕ ಅಕ್ಷಯ್ ಪ್ರವೀಣ್‌ಭಾಯ್ ವಘೇಲಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !