ಹೊಸದಿಗಂತ ಡಿಜಿಟಲ್ ಡೆಸ್ಕ್:
ದೂರವಾಣಿ ಕದ್ದಾಲಿಕೆ ಆರೋಪ ಮಾಡಿದ್ದಕ್ಕೆ ಎಚ್‌ಡಿಕೆ, ಆರ್ ಅಶೋಕ್‌ಗೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಕೇಂದ್ರದಲ್ಲಿ ಬಿಜೆಪಿಯವರದ್ದೇ ಸರ್ಕಾರ ಇದೆಯಲ್ಲವಾ..!? ತನಿಖೆ ಮಾಡಬಹುದಲ್ಲವಾ.? ಇದರಲ್ಲಿ ರಾಷ್ಟ್ರೀಯ ಭದ್ರತಾ ವಿಚಾರ ಬರುತ್ತೆ. ಕದ್ದಾಲಿಕೆ ಮಾಡಿದ್ರೆ ತನಿಖೆ ನಡೆಸಲಿ, ಅಂತಾ ಸವಾಲು ಹಾಕಿದ್ರು.
ಗೃಹ ಇಲಾಖೆಯಲ್ಲಿ ಕೆಲ ಸಚಿವರ ಹಸ್ತಕ್ಷೇಪ ಎಂಬ ವಿಪಕ್ಷಗಳ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ರೀತಿ ಯಾವುದೂ ಇಲ್ಲ. ಪೊಲೀಸ್ ಇಲಾಖೆ ಸಂಬಂಧ ಪರಮೇಶ್ವರ್ ಜೊತೆಯೇ ಚರ್ಚಿಸುತ್ತೇವೆ. ಆ ರೀತಿ ಯಾರೂ ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿದ್ದಾರೆ.