ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಮೆಹಸಾಣದ ಮೊಧೇರಾದಲ್ಲಿರುವ ಸೂರ್ಯ ದೇವಾಲಯಕ್ಕೆ ನಿನ್ನೆ ಪ್ರಧಾನಿ ಮೋದಿಯವರು ಭೇಟಿ ಕೊಟ್ಟಿದ್ದಾರೆ. ʻಮೊಧೇರಾʼವನ್ನು ಪ್ರಧಾನಿ ಮೋದಿ ದೇಶದ ಮೊದಲ ಸೌರಶಕ್ತಿ ಚಾಲಿತ ಗ್ರಾಮ ಎಂದು ಘೋಷನೆ ಮಾಡಿದರು. ಅಲ್ಲಿಯೇ ಇರುವ ಸೂರ್ಯ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ಅಲ್ಲಿನ ಸೌಂದರ್ಯಕ್ಕೆ ಬೆರಗಾದರು. ಮೋದಿ ಆಗಮನ ಹಿನ್ನೆಲೆ ದೇವಾಲಯ ದೀಪಾಲಂಕಾರದಿಂದ ಸಿಂಗಾರಗೊಂಡಿತ್ತು.
ಗುಜರಾತ್‌ನ ಕಲಾ ತಂಡ ದೇವಾಲಯದ ಬಳಿ ಪ್ರದರ್ಶಿಸಿದ ಸಾಂಸ್ಕೃತಿಕ ನೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಕಣ್ತುಂಬಿಕೊಂಡರು.