ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ವತಿಯಿಂದ ರಾಜ್ಯಮಟ್ಟದ ಹೋರಾಟ ಜಾಗೃತಿ ಸಮಾರಂಭ

ಹೊಸದಿಗಂತ ವರದಿ ಹುಬ್ಬಳ್ಳಿ:

 ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ವತಿಯಿಂದ ಅ. 15ರಂದು ಬೆಳಿಗ್ಗೆ 11 ಗಂಟೆಗೆ ಜೆ.ಸಿ. ನಗರದ ಅಕ್ಕಮಹಾದೇವಿ ಅಕ್ಕನ ಬಳಗ ಭವನದಲ್ಲಿ ಉತ್ತರ ಕರ್ನಾಟಕ ವಿಭಾಗಿಯ ಮಟ್ಟದ ಕಾಯಕ ಸಮಾಜದ ಮೀಸಲಾತಿ ಚಿಂಥನ ಮಂಥನ ಹಾಗೂ ಪಂಚಮಸಾಲಿ ಸಮಾಜ 2 ಎ ಗೆ ಸೇರ್ಪಡೆ ವಿರೋಧಿಸಿ ರಾಜ್ಯಮಟ್ಟದ ಹೋರಾಟ ಜಾಗೃತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಸಿ. ಪುಟ್ಟಸಿದ್ದಶೆಟ್ಟಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಮಾರಂಭ ಸಾನಿಧ್ಯ ತಂಗಡಗಿ ಹಡಪದ ಅಪ್ಪಣ್ಣಮಠದ ಅನ್ನದಾನ ಅಪ್ಪಣ್ಣ ಭಾರತಿ ಸ್ವಾಮೀಜಿ, ಕೋಲ್ಹಾರ ಸಂಸ್ಥಾನ ಮಠದ ಯೋಗಿ ಕಲ್ಲಿನಾಥ ಸ್ವಾಮೀಜಿ, ನರಸಿಂಪುರ ಶಾಂತಭೀಶ್ಮ ಚೌಡಯ್ಯ ಸ್ವಾಮೀಜಿ, ಪ್ರಣವಾನಂದ ಸ್ವಾಮೀಜಿ, ಸೂರ್ಯನಾರಾಯಣ ಸ್ವಾಮೀಜಿ, ಅಧ್ಯಕ್ಷತೆ ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ಕಾರ್ಯಾಧ್ಯಕ್ಷ ಶಿವಪುತ್ರಪ್ಪ ಇಟಗಿ, ಉದ್ಘಾಟಕರಾಗಿ ಕೆ.ಸಿ. ಪುಟ್ಟಸಿದ್ದಶೆಟ್ಟಿ, ಚಿಂತನ ಮಂಥನ ವಿಚಾರ ಗೋಷ್ಠಿ ಕೆ.ಎನ್. ಲಿಂಗಪ್ಪ ನಡೆಸುವರು ಎಂದರು.

ಕೊಡಲಸಂಗಮದ ಜಯಮೃತ್ಯುಜಯ ಸ್ವಾಮೀಜಿ ಪಂಚಮ ಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಇದರು ಕಾನೂನು ಬಾಹಿರವಾಗಿದೆ. ಆದರೆ ಸರ್ಕಾರ ಯಾವುದೇ ಕಾರಣಕ್ಕೂ ಮೀಸಲಾತಿ ನೀಡಬಾರದು. ಸರ್ಕಾರದ ವಿರುದ್ಧ ಪ್ರಯೋದನಾ ಕಾರಿ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಪಂಚಮ‌ ಸಾಲಿ ಸಮಾಜ ಆರ್ಥಿಕ ಸದೃಡ್ಢವಾಗಿದೆ. ಇಂತಹ ಸಮಾಜಕ್ಕೆ ಮೀಸಲಾತಿ ನೀಡುವುದು ಕಾನೂನು ಬಾಹಿರವಾಗಿದೆ. ಸರ್ಕಾರ ಅವರಿಗೆ ಮೀಸಲಾತಿ ನೀಡಿದರೆ ಕಾಯಕ ಸಮಾಜದ‌ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ಅನ್ಯಾಯವಾಗಲಿದೆ ಎಂದು ತಿಳಿಸಿದರು. ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಶಿವ ಪುತ್ರಪ್ಪ ಇಟಗಿ, ಸಂಘಟನಾ ಕಾರ್ಯದರ್ಶಿ ನಾರಾಯಣ ಚಿಕ್ಕೋಡಿ, ಸಿದ್ಧಪ್ಪನವರ, ಮಲ್ಲಪ್ಪ. ಎಂ.ಪಿ. ಕುಬಾಂರ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!