ನಾಗಾಲ್ಯಾಂಡ್ ಮಂತ್ರಿ ಜೊತೆ ಹುಡುಗಿಯರ ಪೋಸ್:‌ ಆದ್ರೆ ಅವರ ಕಣ್ಣು ಯಾರ ಮೇಲಿತ್ತು ನೋಡಿ! 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಜಾಪ್ರತಿನಿಧಿಗಳಲ್ಲಿಯೂ ಹಾಸ್ಯಪ್ರಜ್ಞೆ ಇರುತ್ತದೆ. ಸಿಕ್ಕ ಕ್ಷಣದಲ್ಲಿ ಸಂತೋಷವನ್ನು ಹುಡುಕುತ್ತಾರೆ. ನಾಗಾಲ್ಯಾಂಡ್ ಬಿಜೆಪಿ ಸಚಿವ ತೆಮ್ಜೆನ್ ಇಮ್ನಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಸುಂದರ ಹುಡುಗಿಯರೊಂದಿಗೆ ಛಾಯಾಚಿತ್ರ ತೆಗೆಸಿಕೊಂಡಿದ್ದು,  ಇದೀಗ ಈ ಫೋಟೋ ವೈರಲ್ ಆಗಿದೆ.

ಇತ್ತೀಚೆಗೆ ಸಚಿವ ತೆಮ್ಜೆನ್ ಇಮ್ನಾ ವಿಮಾನ ನಿಲ್ದಾಣದ ಫುಡ್ ಕೋರ್ಟ್‌ಗೆ ಹೋಗಿದ್ದರು. ಅದೇ ವೇಳೆಗೆ ಅಲ್ಲಿಗೆ ಬಂದಿದ್ದ ಕೆಲವು ಸುಂದರ ಹುಡುಗಿಯರು ಸಚಿವರ ಜೊತೆ ಚಿತ್ರ ತೆಗೆಸಿಕೊಳ್ಳಲು ಆಸಕ್ತಿ ತೋರಿದರು. ಒಂದೆಡೆ ಪರಾಠಾ ತಿನ್ನಲು ತಯಾರಿ ನಡೆಸುತ್ತಿದ್ದಾರೆ. ಚಹಾ ಕೂಡ ಸಿದ್ಧವಾಗಿದೆ. ಸಾರ್ವಜನಿಕರಿಂದ ಮಂತ್ರಿಗಳಿಗೆ ತಿನ್ನಲು ಬಹಳ ಕಡಿಮೆ ಸಮಯವಿದೆ. ಆ ಸಮಯದಲ್ಲಿ ಎದುರಿಗೆ ತನಗೆ ಇಷ್ಟವಾದ ತಿಂಡಿ ಕಂಡರೆ ಏನು ಮಾಡುತ್ತಾರೋ.. ಫೋಟೋ ಪೋಸ್ ಗೆ ಓಕೆ ಅಂದರೂ ಅವರ ಕಣ್ಣು ಮಾತ್ರ ಆಹಾರದ ಮೇಲೆಯೇ. ಅಷ್ಟರಲ್ಲಿ ಕ್ಯಾಮರಾ ಕ್ಲಿಕ್ ಆಗಿದೆ.

ಇದೇ ವಿಷಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಮಂತ್ರಿ ಪೋಸ್ಟ್ ಮಾಡಿದ್ದಾರೆ. ಹೆಣ್ಮಕ್ಕಳೇ ನಿಮ್ಮನ್ನೇನು ನಾನು ನಿರ್ಲಕ್ಷಿಸಿಲ್ಲ, ಆದರೆ ನನ್ನ ಆಹಾರವನ್ನು ಸ್ವಲ್ಪ ಎಂಜಾಯ್‌ ಮಾಡ್ತಿದ್ದೇನೆ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!