Wednesday, November 30, 2022

Latest Posts

ಅಶ್ಲೀಲ ವೆಬ್‌ಸೈಟ್‌ನಲ್ಲಿ ಫೋಟೊ, ಪ್ರತಿದಿನ ರೇಪ್ ಬೆದರಿಕೆ: ಕಣ್ಣೀರಿಟ್ಟ ಉರ್ಫಿ ಜಾವೇದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್‌ಗೆ ಬಂದ ನಂತರದಿಂದ ಭಾರೀ ಜನಪ್ರಿಯರಾದ ಉರ್ಫಿ ಜಾವೇದ್ ಹೆಚ್ಚು ಚರ್ಚೆ ಆಗುತ್ತಿರುವುದು ಅವರು ಹಾಕುವ ಬಟ್ಟೆಗಳಿಂದ. ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸುವ ಮೂಲಕ ಖ್ಯಾತಿ ಹೊಂದಿರುವ ಉರ್ಫಿ, ಯಾರಾದರೂ ತಮ್ಮ ಬಟ್ಟೆಗಳ ಬಗ್ಗೆ ಮಾತನಾಡಿದರೆ ಖಡಕ್ ಆಗಿ ಉತ್ತರ ನೀಡುತ್ತಾರೆ. ಆದರೆ ಮೊದಲ ಬಾರಿಗೆ ಉರ್ಫಿ ಭಾವುಕರಾಗಿ ಮಾತನಾಡಿದ್ದಾರೆ.

Urfi Javed gets trolled as she gets snapped at the airport in cut out  jumpsuit; fans say, 'Ise koi kapde dedo'ಸಂದರ್ಶನವೊಂದರಲ್ಲಿ ತನಗೆ ಆದ ಕೆಟ್ಟ ಅನುಭವಗಳ ಬಗ್ಗೆ ಹೇಳಿಕೊಂಡಿದ್ದಾರೆ. ‘ನಾನು 15 ವರ್ಷದವಳಿದ್ದಾಗ ಒಂದು ಆಫ್ ಶೋಲ್ಡರ್ ಟಾಪ್ ಹಾಕಬೇಕು ಎಂದು ಬಯಸಿದ್ದೆ. ಆದರೆ ನಮ್ಮ ಊರಿನಲ್ಲಿ ಈ ರೀತಿ ಬಟ್ಟೆ ಸಿಗುತ್ತಿರಲಿಲ್ಲ. ಇರುವ ಟಾಪ್‌ನ್ನು ಕತ್ತರಿಸಿ ಫ್ಯಾಷನ್ ಮಾಡಿಕೊಂಡಿದ್ದೆ. ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದೆ. ಆಗ ನನ್ನ ಫೋಟೊವನ್ನು ಯಾರೋ ಅಶ್ಲೀಲ ವೆಬ್‌ಗೆ ಹಾಕಿದ್ದರು. ಆ ಸಮಯದಲ್ಲಿ ನನಗಾದ ಮಾನಸಿಕ ನೋವು ಅಷ್ಟಿಷ್ಟಲ್ಲ.

We've Got Our Hands Held High In Approval For Urfi Javed's Latest Style  Statement In A Black And White Cutout Dressನೆಗೆಟಿವ್ ಮಾತುಗಳನ್ನು ಹೇಗೆ ಡೀಲ್ ಮಾಡಬೇಕು ಎಂದು ನನಗೆ ತಿಳಿದಿರಲಿಲ್ಲ. ದಿನವೂ ರೇಪ್ ಮಾಡುವುದಾಗಿ ಕರೆಗಳು ಬರುತ್ತವೆ. ಒಂದಲ್ಲ, ನೂರಾರು. ಇದೆಲ್ಲದರಿಂದ ಕುಗ್ಗಿ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದೆ’ ಎಂದು ಹೇಳಿ ಭಾವುಕರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!