ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ಡಿವೈಡರ್ ಗೆ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ.
ಅಪಘಾತದ ಪರಿಣಾಮವಾಗಿ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ. ಆದಿಲಾಬಾದ್‌ನ ಗುಡಿಹತ್ನೂರು ಮಂಡಲದ ಮೇಕಲಗಂಡಿ ಬಳಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಎಂಟು ಜನರಿದ್ದ ಕಾರು ನಿರ್ಮಲ್ ಜಿಲ್ಲೆಯ ಭೈಂಸಾದಿಂದ ಆದಿಲಾಬಾದ್‌ಗೆ ತೆರಳುತ್ತಿದ್ದಾಗ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.
ಮೃತರನ್ನು ಮೋಯಿಜ್, (60) ಅಲಿ, (8) ಖಾಜಾ ಮೊಯಿನುದ್ದೀನ್ (40) ಮೊಹಮ್ಮದ್ ಉಸ್ಮಾನುದ್ದೀನ್ (11) ಮತ್ತು ಫರೀದ್ (12) ಸೇರಿದ್ದಾರೆ. ಫರೀದ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಸಾವನ್ನಪ್ಪಿದರು, ಇತರರು ಸ್ಥಳದಲ್ಲೇ ಸಾವನ್ನಪ್ಪಿದರು.
ಗಾಯಾಳುಗಳನ್ನು ಆದಿಲಾಬಾದ್ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.