ಪುಣ್ಯಕ್ಷೇತ್ರಗಳಿಗೆ ತೆರಳುವ ಯಾತ್ರಾರ್ಥಿಗಳು ಇದನ್ನು ಓದಲೇಬೇಕು..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಶಿಗೆ ತೆರಳುವ ಯಾತ್ರಾರ್ಥಿಗಳಿಗೆ ತಲಾ ಐದು ಸಾವಿರ ರೂ. ಸಹಾಯಧನ ಘೋಷಿಸಲಾಗಿದೆ.

ಜೊತೆಗೆ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಕೊಲ್ಲೂರು, ತಿರುಪತಿ ಹಾಗೂ ಮಂತ್ರಾಲಯಗಳಿಗೆ ತೆರಳುವವರಿಗೆ ಪ್ಯಾಕೇಜ್ ಟ್ರಿಪ್ ವ್ಯವಸ್ಥೆ ಆಗಲಿದೆ.
ಕಾಶಿ ಯಾತ್ರೆಗೆ ತೆರಳುವ ಮೂವತ್ತು ಸಾವಿರ ಯಾತ್ರಾರ್ಥಿಗಳಿಗೆ ತಲಾ ಐದು ಸಾವಿರ ಸಹಾಯಧನ ಸಿಗಲಿದೆ. ಶ್ರೀ ಶೈಲದಲ್ಲಿ ಯಾತ್ರಿ ನಿವಾಸ ನಿರ್ಮಾಣ, ಚಾಮುಂಡಿಬೆಟ್ಟ ಮತ್ತು ದತ್ತಪೀಠದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಪ್ರಸ್ತಾವನೆ, ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ 100 ಕೋಟಿ ರೂ. ನಂದಿ ಬೆಟ್ಟದಲ್ಲಿ 93 ಕೋಟಿ ರೂ. ವೆಚ್ಚದಲ್ಲಿ ರೋಪ್ ವೇ ನಿರ್ಮಾಣ ಇನ್ನು ಜೋಗದಲ್ಲಿ 116 ಕೋಟಿ ರೂ ವೆಚ್ಚದಲ್ಲಿ ಹೊಟೇಲ್ ಹಾಗೂ ರೋಪ್ ವೇ ನಿರ್ಮಾಣವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!