ವಿಮಾನ ಹಾರುವಾಗಲೇ ನಿದ್ರಿಸಿದ ಪೈಲಟ್​ಗಳು: ಲ್ಯಾಂಡಿಂಗ್ ಮಿಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಮಾನ ಹಾರಾಟದ ವೇಳೆಇಬ್ಬರು ಪೈಲಟ್‌ಗಳು ನಿದ್ರೆಗೆ ಜಾರಿದ ಪ್ರಸಂಗ ನಡೆದಿದೆ.
ಇಥಿಯೋಪಿಯಾದಲ್ಲಿ ವಿಮಾನ ಅಂದಾಜು 37 ಸಾವಿರ ಫೀಟ್‌ ಎತ್ತರದಲ್ಲಿ ಹಾರುವಾಗಲೇ ಅಂದಾಜು 25 ನಿಮಿಷಗಳ ಕಾಲ ಇವರು ನಿದ್ರೆ ಮಾಡಿದ್ದು ಮಾತ್ರವಲ್ಲದೆ, ನಿಗದಿತ ಲ್ಯಾಂಡಿಂಗ್‌ ಅನ್ನು ಕೂಡ ಮಿಸ್‌ ಮಾಡಿದ್ದಾರೆ.
ಈ ವೇಳೆ ಆಟೋಪೈಲಟ್ ಸಂಪರ್ಕ ಕಡಿತಗೊಂಡ ನಂತರ ಜೋರಾಗಿ ಮೊಳಗಿದ ಡಿಸ್ಕನೆಕ್ಟ್‌ ವೈಲರ್ ಶಬ್ದದಿಂದ ಪೈಲಟ್‌ಗಳು ಎಚ್ಚರಗೊಂಡು ವಿಮಾನವನ್ನು ಕೆಳಗಿಳಿಸಿದ್ದಾರೆ ಎಂದು ಏವಿಯೇಷನ್‌ ಹೆರಾಲ್ಡ್‌ ವರದಿ ಮಾಡಿದೆ.
ಇಥಿಯೋಪಿಯನ್‌ ಏರ್‌ಲೈನ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಪೈಲಟ್‌ಗಳು ಸುಡಾನ್‌ನ ಖಾರ್ಟೂಮ್‌ನಿಂದ ಇಥಿಯೋಪಿಯಾ ರಾಜಧಾನಿ ಆಡಿಸ್‌ ಅಬಾಬಾಗೆ ವಿಮಾನ ಹಾರಾಟ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಫ್ಲೈಟ್ ಮ್ಯಾನೇಜ್‌ಮೆಂಟ್ ಕಂಪ್ಯೂಟರ್ (ಎಫ್‌ಎಂಸಿ) ಸ್ಥಾಪಿಸಿದ ಮಾರ್ಗಕ್ಕೆ ಅನುಗುಣವಾಗಿ ಇಟಿ343 ವಿಮಾನವು ಆಟೋಪೈಲಟ್‌ನಲ್ಲಿದ್ದಾಗ ಪೈಲಟ್‌ಗಳು ನಿದ್ರೆ ಮಾಡಿದ್ದರು . ವಿಮಾನ ನಿಲ್ದಾಣವನ್ನು ಸಮೀಪಿಸಿದ ನಂತರ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಎಚ್ಚರಿಕೆಯನ್ನು ನೀಡಿದೆ. ಇದರ ನಡುವೆ ತನಗೆ ನಿಗದಿಪಡಿಸಿದ ಸಮಯದಲ್ಲಿ ಹಾಗೂ ಅದಕ್ಕಾಗಿ ಗೊತ್ತುಪಡಿಸಿದ ರನ್‌ವೇಯಲ್ಲಿ ಇಳಿಯುವುದನ್ನೂ ಕೂಡ ತಪ್ಪಿಸಿಕೊಂಡಿದೆ.
ಎಟಿಸಿ ಸಾಕಷ್ಟು ಬಾರಿ ವಿಮಾನದ ಪೈಲಟ್‌ಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೂ, ಅದರಲ್ಲಿ ಯಶ ಕಾಣಲಿಲ್ಲ. ರನ್‌ವೇ FL370ನಲ್ಲಿ ಇಳಿಯುವುದು ಮಿಸ್‌ ಆದ ಬಳಿಕ, ಅಂದಾಜು 25 ನಿಮಿಷಗಳ ನಂತರ, ರನ್‌ವೇ 25L ನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಪೈಲಟ್‌ಗಳು ಲ್ಯಾಂಡ್‌ ಮಾಡಿದ್ದಾರೆ.
ಇದೇ ರೀತಿಯ ಘಟನೆಯು ಮೇ ತಿಂಗಳಲ್ಲಿ ನಡೆದಿತ್ತು
ನ್ಯೂಯಾರ್ಕ್‌ನಿಂದ ರೋಮ್‌ಗೆ ವಿಮಾನವು 38,000 ಅಡಿ ಎತ್ತರದಲ್ಲಿ ಪ್ರಯಾಣಿಸುತ್ತಿದ್ದಾಗ ಇಬ್ಬರು ಪೈಲಟ್‌ಗಳು ನಿದ್ರಿಸಿದಾಗ ಇದೇ ರೀತಿಯ ಘಟನೆಯು ಮೇ ತಿಂಗಳಲ್ಲಿ ನಡೆದಿತ್ತು. ಬಳಿಕ ವಾಯುಯಾನ ನಿಯಂತ್ರಕದಿಂದ ತನಿಖೆ ನಡೆಸಲಾಗಿತ್ತು. ತನಿಖೆಯ ಪ್ರಕಾರ, ಐಟಿಎ ಏರ್‌ವೇಸ್‌ನ ಇಬ್ಬರು ಪೈಲಟ್‌ಗಳು ಏರ್‌ಬಸ್‌ 330 ವಿಮಾನ ಫ್ರಾನ್ಸ್‌ ಮೇಲೆ ಹಾರುವ ವೇಳೆ ನಿದ್ರೆಗೆ ಜಾರಿದ್ದರು ಎಂದು ಬಹಿರಂಗಪಡಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!